3.55 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನಾಭರಣ ಜಪ್ತಿ

Team Newsnap
1 Min Read

ಚಿತ್ರದುರ್ಗ : ದಾಖಲೆ ಇಲ್ಲದೇ ಸಂಗ್ರಹಿಸಿದ್ದ 3.55 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರುನಲ್ಲಿ ನಡೆದಿದೆ.

ಹಿರಿಯೂರು ನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 5 ಕೆಜಿ 250 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ –ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಏಪ್ರಿಲ್ 1 ರಿಂದ ಹೆಚ್ಚಳ 

ಈ ಚಿನ್ನಾಭರಣ ದಾವಣಗೆರೆಯ ವರ್ಧಮಾನ ಜುವೆಲರಿಗೆ ಸೇರಿದೆ ಎಂದು ತಿಳಿದುಬಂದಿದ್ದು , ದಾಖಲೆ ಇಲ್ಲದ ಚಿನ್ನ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಾಜೇಶ್ ಹಾಗೂ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Share This Article
Leave a comment