ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಿ ಗ್ರೇಡ್ ದೇವಾಲಯದ ಅರ್ಚಕರ ತಿಂಗಳ ಸಂಬಳ ಕೇವಲ 2.50 ಪೈಸೆ ಮಾತ್ರ.
ಶನಿವಾರ ಉಪ ಲೋಕಾಯುಕ್ತ ನ್ಯಾ ಕೆ.ಎನ್.ಫಣೀಂದ್ರ ಚಾಮರಾಜನಗರದ ಹೊರವಲಯದಲ್ಲಿರುವ ಹರಳುಕೋಟೆಯ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ದಿಢೀರ್ ಭೇಟಿ ನೀಡಿದರು.ಇದನ್ನು ಓದಿ –ಭಾರತ ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ
ಈ ವೇಳೆ ಅರ್ಚಕ ಅನಂತ ಪ್ರಸಾದ್ ತಮ್ಮ ಸಂಕಷ್ಟವನ್ನು ತೋಡಿಕೊಂಡರು. ನಮಗೆ ನಮ್ಮ ತಂದೆ ಕಾಲದಿಂದಲೂ ತಿಂಗಳಿಗೆ ಕೇವಲ 2.50 ಪೈಸೆ ಸಂಬಳ, ಪಡಿತರಕ್ಕೆ 4.74 ಪೈಸೆ ಬರುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡಲು ಕಷ್ಟ. ಇನ್ನು ಮುಂದಾದರೂ ನಮ್ಮ ಸಿ ಗ್ರೇಡ್ ದೇವಾಲಯದ ಅರ್ಚಕರ ಸಂಬಳ ಜಾಸ್ತಿ ಮಾಡಿಸುವಂತೆ ಮನವಿ ಮಾಡಿಕೊಂಡರು.
ದೇವಾಲಯದ ಪಡಿತರಕ್ಕಾಗಿ ತಿಂಗಳಿಗೆ 4.74 ಪೈಸೆ ನೀಡಲಾಗುತ್ತದೆ. ಈ ಹಣದಲ್ಲಿ ಒಂದು ದಿನದ ಎಣ್ಣೆ ಬತ್ತಿಗೂ ಸಾಲುವುದಿಲ್ಲ. 5 ವರ್ಷದಿಂದ ಅರ್ಚಕರಿಗೆ ಸಂಬಳ ಬಂದಿಲ್ಲ ಎಂದರು. ಇದನ್ನೆಲ್ಲಾ ಕೇಳಿಸಿಕೊಂಡ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಒಂದು ಕ್ಷಣ ತಬ್ಬಿಬ್ಬಾದರು.
ಇಂತಹ ಮುಂದುವರಿದಿರುವ ಕಾಲದಲ್ಲೂ ಇಷ್ಟು ಕಡಿಮೆ ಸಂಬಳ ಅಂದ್ರೆ ಅವರ ಜೀವನ ಹೇಗೆ. ಪರಿಸ್ಥಿತಿ ಹೀಗಿದ್ರೂ ನಾವೆಲ್ಲಾ ಏನು ಮಾಡುತ್ತಿದ್ದೇವೆ ಎಂದು ಬೇಸರಗೊಂಡ ಉಪಲೋಕಾಯುಕ್ತರು 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು