ಶಿಕ್ಷಕನೊಬ್ಬ. 2ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಹೀನಕೃತ್ಯವೆಸಗಿರುವ ಘಟನೆ, ಕೆ ಆರ್ ಪೇಟೆ ತಾಲೂಕಿನ ಗಂಗೇನಹಳ್ಳಿ ಗ್ರಾಮದಲ್ಲಿ ಜರುಗಿದೆ
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈತನನ್ನು ಈಗ ಬಂಧಿಸಲಾಗಿದೆ.
ಮಾರ್ಚ್ 31ರಂದು ಶಾಲೆಗೆ ಹೋಗಿ ಬಂದಿದ್ದಂತ ಆ 2ನೇ ತರಗತಿ ವಿದ್ಯಾರ್ಥಿನಿ, ಇಂದು ಶಾಲೆಗೆ ಹೋಗೋದಿಲ್ಲ ಎಂಬುದಾಗಿ ಹಠ ಹಿಡಿದಳು. ಯಾಕೆ ಎಂಬುದಾಗಿ ಪೋಷಕರು ವಿಚಾರಿಸಿದಾಗ 10 ವರ್ಷದಿಂದ ಈ ಶಾಲೆಯ ಶಿಕ್ಷಕ ಚಂದ್ರಶೇಖರ್ ಲೈಂಗಿಕ ಕಿರುಕುಳ ನೀಡಿದಂತ ವಿಷಯವನ್ನು ಹೇಳಿದ್ದಾಳೆ ಎಂಬ ಸಂಗತಿಯ ಬಗ್ಗೆ ಬಿಇಒ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ.
ಇದನ್ನು ಓದಿ :ಪ್ರಿಯತಮನಿಗಾಗಿ ತಾಯಿಯನ್ನೇ ಯಾಮಾರಿಸಿ 1 kG ಚಿನ್ನ ಕದ್ದ ಮಗಳು – ದೀಪ್ತಿ , ಮದನ್ ಬಂಧನ
ಕೂಡಲೇ ವಿಷಯದ ಗಂಭೀರತೆಯನ್ನು ಅರಿತಂತ ಬಿಇಓ ಬಸವರಾಜ ಅವರು, ಶಿಕ್ಷಕ ಚಂದ್ರಶೇಖರ್ ನನ್ನು ಅಮಾನತುಗೊಳಿಸಿದ್ದಾರೆ.
ಪೋಷಕರು ಕಿಕ್ಕೇರಿ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ, ಅವರನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ