November 16, 2024

Newsnap Kannada

The World at your finger tips!

BJP , election , politics

ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ; 23 ಮಂದಿಗೆ ಟಿಕೆಟ್ : 7 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ

Spread the love

ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.

ಎರಡನೇ ಪಟ್ಟಿಯಲ್ಲಿ 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಒಟ್ಟು 23 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. ಎರಡನೇ ಪಟ್ಟಿಯಲ್ಲೂ ಮೈಸೂರಿನ ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ. ಇದು ಹಾಲಿ‌ ಶಾಸಕ ಎಸ್​​ಎ ರಾಮದಾಸ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ರಾಮದಾಸ್​ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಬುಧವಾರ ವಿಷ ಸೇವಿಸುವ ಯತ್ನವನ್ನೂ ಮಾಡಿದ್ದರು.

ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರು ಕಂಡುಬಂದಿಲ್ಲ. ಬುಧವಾರವಷ್ಟೇ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದರು.

ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲ ಬಿಜೆಪಿ ಟಿಕೆಟ್?

  • ದೇವರ್ ಹಿಪ್ಪರಗಿ – ಸೋಮನಗೌಡ ಪಾಟೀಲ್ (ಸಾಸನೂರು)
  • ಬಸವನ ಬಾಗೇವಾಡಿ – ಎಸ್​ಕೆ ಬೆಳ್ಳುಬ್ಬಿ
  • ಇಂಡಿ – ಕಾಸಗೌಡ ಬಿರದಾರ್ಗು
  • ರುಮಿಟ್ಕಲ್ – ಲಲಿತ ಅನಾಪುರ್ಬೀ
  • ದರ್ – ಈಶ್ವರ್ ಸಿಂಗ್ ಠಾಕೂರ್
  • ಬಾಲ್ಕಿ- ಪ್ರಕಾಶ್ ಖಂಡ್ರೆ
  • ಗಂಗಾವತಿ – ಪ್ರಸನ್ನ ಮುನವಳ್ಳಿ
  • ಕಲಘಟಗಿ – ನಾಗರಾಜ್ ಛಬ್ಬಿ
  • ಹಾನಗಲ್ – ಶಿವರಾಜ್ ಸಜ್ಜನರ್
  • ಹಾವೇರಿ (ಎಸ್​ಸಿ) – ಗವಿಸಿದ್ದಪ್ಪ ದ್ಯಾಮಣ್ಣನವರ್
  • ಹರಪ್ಪನಹಳ್ಳಿ – ಕರುಣಾಕರ ರೆಡ್ಡಿ
  • ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜ್
  • ದಾವಣಗೆರೆ ದಕ್ಷಿಣ – ಅಜಯ್ ಕುಮಾರ್
  • ಮಾಯಕೊಂಡ (ಎಸ್​ಸಿ) – ಬಸವರಾಜ ನಾಯ್ಕ್
  • ಚನ್ನಗಿರಿ – ಶಿವಕುಮಾರ್
  • ಬೈಂದೂರು – ಗುರುರಾಜ್ ಗಂಟಿಹೊಳೆ
  • ಮೂಡಿಗೆರೆ (ಎಸ್​ಸಿ) – ದೀಪಕ್ ದೊಡ್ಡಯ್ಯ
  • ಗುಬ್ಬಿ – ಎಸ್​ಡಿ ದಿಲೀಪ್ ಕುಮಾರ್
  • ಶಿಡ್ಲಘಟ್ಟ – ರಾಮಚಂದ್ರ ಗೌಡ
  • ಕೆಜಿಎಫ್ (ಎಸ್​ಸಿ) – ಅಶ್ವಿನಿ ಸಂಪಂಗಿ
  • ಶ್ರವಣಬೆಳಗೊಳ- ಚಿದಾನಂದ
  • ಅರಸಿಕೆರೆ- ಜಿವಿ ಬಸವರಾಜು
  • ಹೆಗ್ಗಡದೇವನಕೋಟೆ- ಕೃಷ್ಣ ನಾಯ್ಕ್

ವಯಸ್ಸಿನ ಕಾರಣಕ್ಕೆ 7 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರು ಕಂಡುಬಂದಿಲ್ಲ. ಶೆಟ್ಟರ್ ಕ್ಷೇತ್ರದ ಅಭ್ಯರ್ಥಿ ಬಾಕಿ ಇರಿಸಲಾಗಿದೆ. ಸಿದ್ದು ವಿರುದ್ಧ ಸೋಮಣ್ಣ, ಬಂಡೆ ವಿರುದ್ಧ ಸಾಮ್ರಾಟ್

ಕಲಘಟಗಿ ಹಾಲಿ ಶಾಸಕ ನಿಂಬಣ್ಣವರಿಗೆ ಟಿಕೆಟ್ ಮಿಸ್ ಆಗಿದೆ. ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್‌ ಘೊಷಣೆಯಾಗಿಲ್ಲ. ಅವರು ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆ ಕ್ಷೇತ್ರಕ್ಕೆ ಎಸ್​ಡಿ ದಿಲೀಪ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೈಂದೂರು ಹಾಲಿ ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ನೀಡಿಲ್ಲ. ಬಿಎಸ್‌ವೈ ಸಂಬಂಧಿ ಎನ್‌.ಆರ್‌.ಸಂತೋಷ್‌ ಅವರಿಗೂ ಟಿಕೆಟ್ ನೀಡಿಲ್ಲ. ಇವರು ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

23 people list

Copyright © All rights reserved Newsnap | Newsever by AF themes.
error: Content is protected !!