ಮೈಸೂರು : ಮತದಾನಕ್ಕೂ ಮುನ್ನವೇ 26 ಮಂದಿ ಹಿರಿಯ ನಾಗರೀಕರು ನಿಧನ

Team Newsnap
1 Min Read
Election to Tripura Legislative Assembly today - 13 percent voting ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ - ಶೇ 13 ರಷ್ಟು ಮತದಾನ

ಮೈಸೂರು :
ಮತದಾನಕ್ಕೂ ಮುನ್ನವೇ ಸಮೀಕ್ಷಾ ಕಾರ್ಯ ಪೂರ್ಣಗೊಂಡು ತಿಂಗಳು ಮುಗಿಯುವ ವೇಳೆಗೆ ಮೈಸೂರು ಜಿಲ್ಲೆಯಲ್ಲಿ 26 ಮಂದಿ ಹಿರಿಯ ನಾಗರೀಕರು ನಿಧನರಾಗಿ ಇಂದಿನ ಮತದಾನದಿಂದ ವಂಚಿತರಾಗಿದ್ದಾರೆ.

ಶನಿವಾರದಿಂದ ಆರಂಭವಾದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಹಾಗೂ ವಿಕಲಚೇತನ ಮಾತದಾನ ಮಾಡುವ ಕಾರ್ಯ ಆರಂಭವಾಯಿತು.

ಮೈಸೂರು ಜಿಲ್ಲೆಯಾದ್ಯಂತ ಇರುವ 11 ಕ್ಷೇತ್ರಗಳಲ್ಲಿ 12 ಡಿ ಅಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಒಟ್ಟು 954 ಮಂದಿ ಇಂದು (ಏ.29ರಂದು) ಮತದಾನ ಮಾಡಿದರು.

80 ವರ್ಷ ಮೇಲ್ಪಟ್ಟವರು- 787 ಮತದಾನ ಮಾಡಿದ್ದಾರೆ, ವಿಶೇಷಚೇತನ- 167 ಮಂದಿಯಿಂದ ಮತದಾನ ಮನೆಯಲ್ಲಿ ಮತದಾನ ಮಾಡಿದರು ಒಟ್ಟು ಇಂದು 954 ಮತದಾನವಾಗಿದೆ.

ಎಲ್ಲಿ ಎಷ್ಟು ಮಂದಿ ನಿಧನ :
ಪಿರಿಯಾಪಟ್ಟಣ 2, ನಂಜನಗೂಡು 11, ಚಾಮುಂಡೇಶ್ವರಿ 7, ವರುಣಾ 2, ಟಿ ನರಸೀಪುರ 4 ಮಂದಿ ಹಿರಿಯ ನಾಗರೀಕರು ನಿಧನರಾಗಿದ್ದಾರೆ.

Share This Article
Leave a comment