November 24, 2024

Newsnap Kannada

The World at your finger tips!

mumbai , terrorist , bomb blast

26/11 Mumbai terrorist attack: The darkest day of country 26/11 ಮುಂಬೈ ಉಗ್ರರ ದಾಳಿ : ದೇಶ ಕಂಡ ಅತ್ಯಂತ ಕರಾಳ ದಿನ(26/11 Mumbai Attack)

26/11 ಮುಂಬೈ ಮೇಲೆ ಉಗ್ರರ ದಾಳಿ : ದೇಶ ಕಂಡ ಅತ್ಯಂತ ಕರಾಳ ದಿನ(26/11 Mumbai Attack)

Spread the love

ನವೆಂಬರ್​ 26, 2008 ( November 26 , 2008 ). ದೇಶ ಕಂಡ ಕರಾಳ ದಿನ. ಮುಂಬೈ ( Mumbai ) ಮಹಾ ನಗರದ ಮೇಲೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ( Bomb Blast ) ನಡೆಸಿ, ಪಾಪಿ ಉಗ್ರರ ( terrorist ) ಕೃತ್ಯಕ್ಕೆ 166 ಜನರು ಹತರಾದರೆ, 300 ಮಂದಿ ಗಾಯಗೊಂಡಿದ್ದರು. ಆ ಕಹಿ ಘಟನೆ ನಡೆದು ಇಂದಿಗೆ 14 ವರ್ಷ.

ಲಷ್ಕರ್-ಎ-ತೊಯ್ಬಾ ( Lashkar-e-Taiba )ಸಂಘಟನೆಯ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ( Pakistan ) ಭಾರತದ ಒಳ ನುಸುಳಿ ಮಹಾ ನಗರವಾದ ಮುಂಬೈಯನ್ನು ( Mumbai ) ಗುರಿಯಾಗಿಸಿ ಬಾಂಬು ಮತ್ತು ಗುಂಡಿನ ಮಳೆಗೈದಿದ್ದರು.

ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ( Lashkar-e-Taiba ) ಉಗ್ರರು 2008ರ ನವೆಂಬರ್ 26 ರಿಂದ 29ರ ವರೆಗೆ ಮೂರು ದಿನಗಳ ಕಾಲ ದಾಳಿ ನಡೆಸಿದರು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬಯಿಗೆ ಧಾವಿಸಿ ದಾಳಿಯನ್ನು ಎದುರಿಸುವಲ್ಲಿ ಸಮರ್ಥವಾಯಿತು. ಉಗ್ರರು ನಡೆಸಿದ ಈ ಆತ್ಮಾಹುತಿ ದಾಳಿಯಿಂದಾಗಿ ಸರ್ಕಾರಿ ಅಧಿಕಾರಿಗಳೂ, ಸೈನಿಕರು,ಸಾಮಾನ್ಯರು ಸೇರಿದಂತೆ ಅನೇಕರು ಪ್ರಾಣ ತೆತ್ತೆರು.

ಮುಂಬಯಿ ನಗರ ( Mumbai City ) ಹೃದಯ ಭಾಗವಾಗಿರುವ ಛತ್ರಪತಿ ಶಿವಾಜಿ ಟರ್ಮಿನಸ್, ಗಣ್ಯರು ಹಾಗು ವಿದೇಶಿಗಳು ಹೆಚ್ಚಾಗಿ ಇರುವಂತಹ ಒಬೆರಾಯ್ ಟ್ರೈಡೆಂಟ್ ( Trident ), ತಾಜ್ ಹೋಟೆಲ್ ( Taj Hotel ), ಲಿಯೋಪೋಲ್ಡ್ ಕೆಫೆ ( Leopold Café ) , ಕಾಮಾ ಹಾಸ್ಪಿಟಲ್ ( Cama Hospital ) , ನಾರಿಮನ್ ಹೌಸ್ ( Nariman House ), ಮೆಟ್ರೋ ಸಿನೆಮಾ ( Metro Cinema ), ಸೆಂಟ್ ಕ್ಸೇವಿಯರ್ ಕಾಲೇಜು ( St. Xavier College )ದಾಳಿಗೆ ಸಾಕ್ಷಿಯಾದ ಸ್ಥಳಗಳು.

ಮೇಜ್ ಗಾವ್ ( Majgaon ) ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. 28 ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೋಲಿಸರು ಹಾಗೂ ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಆದರೆ, ತಾಜ್ ಹೋಟೆಲ್ ಒಳಗೆ ಅವಿತುಕೊಂಡ ಉಗ್ರರನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ದೇಶದ ಇತರ ಸ್ಥಳಗಳಿಂದ ಮುಂಬಯಿಗೆ ರಾಷ್ಟ್ರೀಯ ಭದ್ರತಾಪಡೆಗಳನ್ನ ರವಾನಿಸಲಾಯಿತು. ಅಂತಿಮವಾಗಿ ನವೆಂಬರ್ 29ರ ದಿನದಂದು ಎಲ್ಲ ದಾಳಿಕೋರರನ್ನು ಕೊಂದು ಒಬ್ಬನನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಸಫಲವಾಯಿತು. ಆತನೇ ಅಜ್ಮಲ್ ಕಸಾಬ್.

ದಾಳಿ  ನಡೆದ ಪ್ರಮುಖ ಸ್ಥಳಗಳು!

WhatsApp Image 2022 11 25 at 12.45.54 PM
  • – ಛತ್ರಪತಿ ಶಿವಾಜಿ ಟರ್ಮಿನಸ್‌ ( Chhatrapati Shivaji Terminus )
  • – ಒಬೆರಾಯ್‌ ಟ್ರೈಡೆಂಟ್‌ ಹೋಟೆಲ್‌ ( Oberoi Trident Hotel )
  • – ತಾಜ್‌ ಹೋಟೆಲ್‌ ( Taj Hotel )
  • – ಲಿಯೋಪೋಲ್ಡ್‌ ಕೆಫೆ ( Leopold Café )
  • – ಕಾಮಾ ಹಾಸ್ಪಿಟಲ್‌ ( Cama Hospital )
  • – ನಾರಿಮನ್‌ ಹೌಸ್‌ ( Nariman House )
  • – ಕೆಲ ಟ್ಯಾಕ್ಸಿಗಳಲ್ಲಿ ಸ್ಫೋಟ ( Taxi )

ಡೆಡ್ಲಿ ಅಟ್ಯಾಕ್​ ನಡೆದಿದ್ದು ಹೇಗೆ?

2008 ನ.21ರಂದು ಪಾಕಿಸ್ತಾನದ 12 ಮಂದಿ ಉಗ್ರರು ಬೋಟ್‌ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಬಾಂಬ್​ ಮತ್ತು ಗುಂಡಿನ ದಾಳಿ ನಡೆಸಿದರು. ಒಟ್ಟು 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ತಾಜ್‌, ಒಬೇರಾಯ್‌ ನಂತಹ ಹೋಟೆಲ್‌ಗಳು ಉಗ್ರರ ಗುಂಡಿನ ದಾಳಿ ಮತ್ತು ಬಾಂಬ್‌ ಬ್ಲಾಸ್ಟ್‌ಗೆ ಹೊತ್ತಿ ಉರಿದವು. ಜನರು ಉಗ್ರರ ಕಪಿಮುಷ್ಠಿಯಲ್ಲಿ ನರಳಿ ಅಕ್ಷರಶಃ ನರಕ ದರ್ಶನ ಕಂಡರು.ರಕ್ಷಣೆಗೆ ಹೋದ ನಮ್ಮ ಸೈನಿಕರು ಕೂಡ ಹುತಾತ್ಮರಾದರು.

WhatsApp Image 2022 11 25 at 12.53.48 PM

ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ ಪೋಲಿಸ್‌ ( Police ) ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಉಗ್ರರಿಂದ ಹತರಾದರು. ಈ ಉಗ್ರಗಾಮಿ ಕೃತ್ಯವನ್ನು ಇಡೀ ವಿಶ್ವವೇ ಖಂಡಿಸಿತ್ತು.

ಉಗ್ರ ಹಾರಿಸಿದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯತೋರಿದ ತುಕಾರಾಮ್‌ ಕೊನೆಯುಸಿರೆಳೆಯುವ ಹಂತದಲ್ಲಿದ್ದರೂ ಕಸಬ್‌ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದರು. ಈ ಕಾರಣಕ್ಕಾಗಿ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಗೆ ಅಶೋಕ ಚಕ್ರ ಗೌರವ ನೀಡಿದೆ.

WhatsApp Image 2022 11 25 at 12.47.56 PM

4 ವರ್ಷದ ನಂತರ ಕಸಬ್‌ ( Kasab ) ಗಲ್ಲಿಗೆ

ನಾಲ್ಕು ದಿನಗಳ ಕಾಲ ಹೋಟೆಲ್ ನಲ್ಲಿದ್ದ ಉಗ್ರರು ಭದ್ರತಾ ಪಡೆಯ 18 ಯೋಧರನ್ನು ಕೊಂದಿದ್ದರು ,ಆದರೆ ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಿದ್ದ ಭದ್ರತಾ ಪಡೆ ಉಗ್ರ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು ,ಅಜ್ಮಲ್ ಕಸಬ್ ( Ajmal Kasab ) ನನ್ನು ನವಂಬರ್ 21 2012ರಲ್ಲಿ ಪುಣೆಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು

ಮುಂಬೈ ( Mumbai )ಈಗೆಷ್ಟು ಸುರಕ್ಷಿತ ?

2008ರ ಭಯೋತ್ಪಾದಕರ ನಡೆಸಿದ ದಾಳಿಯ ನಂತರ ಎಚ್ಚೆತ್ತ ಮುಂಬೈ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಭಾರತೀಯ ಸೇನೆ, ಕೋಸ್ಟಲ್ ಗಾರ್ಡ್ ಮತ್ತು ಮರೈನ್ ಪೊಲೀಸ್ ಸೇರಿ ಮೂರು ಹಂತದಲ್ಲಿ ಕರಾವಳಿ ಪ್ರದೇಶದಲ್ಲಿ ಹದ್ದಿನಕಣ್ಣಿಡಲಾಗಿದೆ. ಜೊತೆಗೆ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ರಡಾರ್, ಹೈಪವರ್ ಅಂಡರ್ ವಾಟರ್ ಸೆನ್ಸಾರ್, ಡ್ರೈವರ್ ಡಿಟೆಕ್ಷನ್ ಸೋನಾರ್ಸ್ ಇರುವ ಆರ್ಟ್ ಹಾರ್ಬರ್ ಡಿಫೆನ್ಸ್ ಸಿಸ್ಟಮ್ ಜಾರಿಗೊಳಿಸಿದೆ.

ಮುಂಬೈ ಪೊಲೀಸರು ( Mumbai Police )ನೂತನ ಡಿಜಿಟಲ್ ಆ್ಯಪ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ನಗರದಾದ್ಯಂತ 5,200 ಹೈ ಟೆಕ್ನಾಲಜಿ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2016ರಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಮುಂಬೈನಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!