ಯಾದಗಿರಿಯಿಂದ ಪಾಕ್ಗೆ ಬರೋಬ್ಬರಿ 220 ಸ್ಯಾಟಲೈಟ್ ಫೋನ್ ಕರೆಗಳನ್ನು ಮಾಡಲಾಗಿರುವುದು ತನಿಖೆಯಿಂದ ಬಯಲಾಗಿದೆ.
ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯಾಂಶಗಳು ಬಯಲಾಗುತ್ತಿದೆ. ಜಿಲ್ಲೆಯಿಂದ 220 ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಕರೆಗಳ ಡಿಟೇಲ್ಸ್ ಕಲೆ ಹಾಕುವುದೇ ಟೆಕ್ನಿಕಲ್ ಟೀಮ್ಗೆ ಸವಾಲಾಗಿ ಪರಿಣಮಿಸಿದೆ.
ಸ್ಯಾಟಲೈಟ್ ಕರೆಗಳು ಎಲ್ಲಿಂದ ಎಲ್ಲಿಗೆ ಹೋಗಿವೆ ಅನ್ನೋದನ್ನು ರಾಜ್ಯದಲ್ಲಿ ಪತ್ತೆ ಹಚ್ಚೋದೆ ಕಠಿಣವಾಗಿದೆ. ಈ ಪ್ರಕರಣದ ಬೆನ್ನಲ್ಲಾದ್ರು ಟೆಕ್ನಿಕಲ್ ಟೀಮ್ಗೆ ಆಧುನಿಕತೆಯ ಸ್ಪರ್ಶ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸ್ಯಾಟಲೈಟ್ ಫೋನ್ ಬಳಕೆ ಸದ್ದಡಗಿಸಲು ಗೃಹ ಇಲಾಖೆ ಸದೃಢಡವಾಗಿದೆ ಎಂದಿರುವ ಗೃಹ ಸಚಿವರು ರಾಜ್ಯದಿಂದ ಹೊರ ದೇಶಗಳಿಗೆ ಇತ್ತೀಚೆಗೆ 220 ಸ್ಯಾಟಲೈಟ್ ಫೋನ್ ಕರೆಗಳು ಹೋಗಿರುವುದು ದೃಢವಾಗಿದೆ. ನಿಷೇಧಿತ ಫೋನ್ ಬಳಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ