2023ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ -ನಿಖಿಲ್ ಕುಮಾರಸ್ವಾಮಿ

Team Newsnap
1 Min Read

2023ನೇ ವಿಧಾನ ಸಭಾ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಎಂದು ಜೆಡಿಎಸ್​​ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ದ 1 ಕೋಟಿ ರು ಮಾನನಷ್ಟ ಮೊಕದ್ದಮೆ ದಾಖಲು – ಸಾರಾ ಮಹೇಶ್

ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ನಿಖಿಲ್, ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಹೆಚ್.ಡಿ.ದೇವೆಗೌಡರಿಗೆ 89 ವರ್ಷ ವಯಸ್ಸಾಗಿದೆ. ಕಳೆದ ಎರಡೂವರೆ ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಹಲವು ಕಾರ್ಯಕರ್ತರಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಯಾಗಿತ್ತು. ಎರಡು ತಿಂಗಳ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಟ್ಟರು. ದೇವೇಗೌಡರು ನಮ್ಮ ಜೊತೆ ನೂರಾರು ವರ್ಷಗಳ‌ ಕಾಲ ಬದುಕುತ್ತಾರೆ ಎಂದರು.

2023ನೇ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆಯ ಚುನಾವಣೆ ಎಂದು ನಿಖಿಲ್ ಭಾವುಕರಾದರು.. ಜೆಡಿಎಸ್ ಒಂದು ಹೊಸ ಅಧ್ಯಾಯ ಪ್ರಾರಂಭ ಆಗಬೇಕು. ನಮ್ಮ ತಂದೆ ಉಳಿದಿದ್ದೇ ಹೆಚ್ಚು, ನಮ್ಮ ತಂದೆಯನ್ನು ಉಳಿಸಿರೋದು ಆ ಭಗವಂತ. ರೈತರ ಜೀವನವನ್ನು ಹಸನಗೊಳಿಸ್ಬೇಕು ಎಂಬ ಉದ್ದೇಶದಿಂದ.

ನಿಮ್ಮೆಲ್ಲರ ಆಶೀರ್ವಾದದಿಂದ ಎಷ್ಟು ಜನ ಹೆಣ್ಮಕ್ಕಳು ಮನೆಗಳಲ್ಲಿ ದೀಪ ಹಚ್ಚಿದ್ದಾರೆ. ಕುಮಾರಣ್ಣನಿಗೆ ಏನು ಆಗಬಾರದು ಎಂದು. ನೂರಾರು ವರ್ಷಗಳ‌ ಕಾಲ ಬದುಕಬೇಕು ಅಂತಾ. ಜನ ಏನೂ ಅಪೇಕ್ಷೆ ಪಡದೇ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹಾರೈಸಿದ್ದಾರೆ.

Share This Article
Leave a comment