ಬಾಡಿಗೆದಾರರಿಗೆ ಗೃಹ ಜ್ಯೋತಿ ಸೌಲಭ್ಯದ ಅಡಿ 200 ಯುನಿಟ್ ಒಳಗೆ ಉಚಿತ ವಿದ್ಯುತ್ (Free Electricity) ಅನ್ವಯ ಆಗುತ್ತದೆ. ಕಮರ್ಷಿಯಲ್ ಅವರಿಗೆ ಯೋಜನೆ ಅನ್ವಯ ಇಲ್ಲ.
ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡಿಗೆದಾರರಿಗೂ ಉಚಿತ ವಿದ್ಯುತ್ ಕೊಡ್ತೀವಿ. ಬಡವರು ಯಾರು 200 ಯುನಿಟ್ ಒಳಗೆ ಬಳಸುತ್ತಾರೆ, ಅವರಿಗೆ ಉಚಿತವಾತ ವಿದ್ಯುತ್ ಅನ್ವಯ. 200 ಯುನಿಟ್ ಒಳಗೆ ಬಳಸೋರು ಬಿಲ್ ಕಟ್ಟೋ ಹಾಗೆ ಇಲ್ಲ. ಬಾಡಿಗೆದಾರರಿಗೂ ಇದು ಅನ್ವಯ ಆಗುತ್ತೆ ಎಂದು ಸ್ಪಷ್ಟಪಡಿಸಿದರು.