March 31, 2023

Newsnap Kannada

The World at your finger tips!

boy dance

ಪಾರ್ವತಿ ವೇಷಧಾರಿ 20ರ ಹುಡುಗನಿಗೆ ಹೃದಯಾಘಾತ : ನೃತ್ಯ ಮಾಡುತ್ತಲೇ ಸಾವು

Spread the love

ಪಾರ್ವತಿಯ ವೇಷ ಧರಿಸಿ ನರ್ತಿಸುತ್ತಿದ್ದ 20 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ವೇದಿಕೆಯಲ್ಲೇ ಕುಸಿದು ಸಾವನ್ನಪ್ಪಿದ ಘಟನೆ ಜಮ್ಮುವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ನರ್ತಕಿಯ ವೇಷ ಧರಿಸಿ ಪ್ರದರ್ಶನ ನೀಡುತ್ತಿದ್ದ. ಈ ವೇಳೆ ಹೃದಯಾಘಾತವಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ.

ಘಟನೆಗೆ ಸಂಬಂಧಿಸಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವೀಡಿಯೋದಲ್ಲಿ ಪಾರ್ವತಿ ವೇಷ ಧರಿಸಿ ಯೋಗೇಶ್ ಗುಪ್ತಾ ನೃತ್ಯ ಮಾಡುತ್ತಿದ್ದ. ಅಲ್ಲಿ ನೆರೆದಿದ್ದ ಜನರೆಲ್ಲರೂ ಆ ನೃತ್ಯವನ್ನು ಆಹ್ಲಾದಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆತ ಕುಸಿದು ಅಲ್ಲಿಯೇ ಬೀಳುತ್ತಾನೆ. ಅದಾದ ಬಳಿಕವೂ ಕೆಲ ಸೆಕೆಂಡಿನ ನಂತರ ಕೆಲವು ಸ್ಟೇಪ್‍ಗಳನ್ನು ಮಾಡುತ್ತಾನೆ. ಆ ಬಳಿಕ ಆತ ಅಲ್ಲಿಂದ ಏಳುವುದೇ ಇಲ್ಲ.

ದುರಂತವೆಂದರೆ ಕೆಲಕಾಲ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಆತ ಇನ್ನೂ ಪ್ರದರ್ಶನವನ್ನೇ ನೀಡುತ್ತಿದ್ದಾನೆ ಎಂದು ಕೊಳ್ಳುತ್ತಾರೆ. ಆದರೆ ಕೆಲ ನಿಮಿಷಗಳಾದರೂ ಆತ ಏಳದಿದ್ದಾಗ ಅಲ್ಲಿದ್ದ ಶಿವನ ವೇಷವನ್ನು ಧರಿಸಿದ ಯೋಗೇಶ್ ಬಳಿ ಹೋಗಿ ಪರೀಕ್ಷೆ ನಡೆಸುತ್ತಾನೆ. ಆದರೂ ಆತನಿಗೆ ಎಚ್ಚರವಾಗಿಲ್ಲವೆಂದು ಅಲ್ಲಿದ್ದ ಸಿಬ್ಬಂದಿಯನ್ನು ಕರೆಯುತ್ತಾನೆ. ತಕ್ಷಣ ಯೋಗೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಯೋಗೇಶ್ ಗುಪ್ತಾ ಸಾವನ್ನಪ್ಪಿದ್ದಾನೆ ಎಂದು ಪ್ರಕಟಿಸಿದರು

error: Content is protected !!