ಡಿಸಿಎಂ ಡಿಕೆಶಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆ

Team Newsnap
1 Min Read

ಮಾಜಿ ಸಚಿವ, ರಾಜ್ಯ ಬಿಜೆಪಿ ಹಿರಿಯ ನಾಯಕ ಆರ್ ಅಶೋಕ್‌ ಅವರ ಕ್ಷೇತ್ರದ ಹಲವು ನಾಯಕರಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಗಾಳಹಾಕಿದ್ದು, ಮಾಜಿ ಸಚಿವ ಆರ್. ಅಶೋಕ್ ಅವರ 20 ಕ್ಕೂ ಹೆಚ್ಚು ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು, ಮಾಜಿ ಉಪಮೇಯರ್, ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಸೌಮ್ಯರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಇತರ ಮುಖಂಡರೊಂದಿಗೆ 20ಕ್ಕೂ ಅನೇಕ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದರು.ಇದನ್ನು ಓದಿ – ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಪೀಠಿಕೆ ವಾಚನ

ಪಕ್ಷ ಸೇರ್ಪಡೆ ಆದವರು ..?

 • ಎಲ್‌. ಶ್ರೀನಿವಾಸ್, ಮಾಜಿ ಉಪ ಮಹಾಪೌರರು, ಪದ್ಮನಾಭನಗರ
 • ಪ್ರಸಾದ್ ಬಾಬು, ಜೆಡಿಎಸ್ ಮುಖಂಡ
 • ಆರಪ್ಪ, ಮಾಜಿ ತಾ.ಪಂ.ಸದಸ್ಯ
 • ಶೋಭಾ ಆಂಜಿನಪ್ಪ, ಮಾಜಿ ಕಾರ್ಪೊರೇಟ‌ರ್
 • ಹೆಚ್.ನಾರಾಯಣ್‌, ಮಾಜಿ ಕಾರ್ಪೊರೇಟರ್
 • ಹೆಚ್. ಸುರೇಶ್, ಮಾಜಿ ಕಾರ್ಪೊರೇಟರ್, ಹಿಂದುಳಿದ ವರ್ಗಗಳ ನಾಯಕ
 • ವೆಂಕಟಸ್ವಾಮಿ ನಾಯ್ಡು, ಮಾಜಿ ಕಾರ್ಪೊರೇಟ‌ರ್
 • ಸಿ. ಎಲ್‌.ಗೋವಿಂದ ರಾಜು, ಮಾಜಿ ಕಾರ್ಪೊರೇಟ‌ರ್
 • ರಂಗರಾಮೇಗೌಡ್ರು, ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ
 • ಲಕ್ಷ್ಮಿ ಸುರೇಶ್, ಮಾಜಿ ಜಿ.ಪಂ. ಸದಸ್ಯರು
 • ಪವನ್, ಬಿಜೆಪಿ ಮುಖಂಡರು
 • ಸುಪ್ರಿಯಾ ಶೇಖರ್, ಮಾಜಿ ಕಾರ್ಪೊರೇಟ‌ರ್
 • ಬಾಲಕೃಷ್ಣ, ಮಾಜಿ ಕಾರ್ಪೊರೇಟರ್
 • ಸುಗುಣ ಬಾಲಕೃಷ್ಣ, ಮಾಜಿ ಕಾರ್ಪೊರೇಟರ್
 • ಯು.ಕೃಷ್ಣಮೂರ್ತಿ, ಮಾಜಿ ಕಾರ್ಪೊರೇಟರ್
 • ನರಸಿಂಹ ನಾಯಕ್, ಮಾಜಿ ಕಾರ್ಪೊರೇಟರ್.
 • ಅಕ್ಬರ್ ಖಾನ್, ಜೆಡಿಎಸ್ ಮುಖಂಡ
 • ರವಿಕಿರಣ್, ಸೀರಿಯಲ್ ನಟ
Share This Article
Leave a comment