ಬೆಂಗಳೂರಿನಲ್ಲಿ 2 ಕೋಟಿ ರು ನಕಲಿ ನೋಟು ವಶ : 3 ಮಂದಿ ಬಂಧನ

Team Newsnap
1 Min Read

ಖೋಟಾನೋಟು ತಯಾರಿಸುತ್ತಿದ್ದ ಮೂರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಪಾದರಾಯನಪುರ ನಿವಾಸಿ ಗುಂಡು, ಇಮ್ರಾನ್ ಹಾಗೂ ಮುಬಾರಕ್ ಬಂಧಿತ ಆರೋಪಿಗಳಾಗಿದ್ದು, ಬಂಧಿತನಿಂದ ನಕಲಿ ನೋಟು ತಯಾರು ಮಾಡುವ ಯಂತ್ರ ಮತ್ತು ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ.

ಸುಮಾರು ಎರಡು ಕೋಟಿ ರೂ. ಬೆಲೆ ಬಾಳುವ ನಕಲಿ ನೋಟು ವಶಕ್ಕೆ ಪಡೆಯಲಾಗಿದೆ. 2000 ಮತ್ತು 200 ರು. ನ ಪಿಂಕ್ ನಕಲಿ ನೋಟುಗಳನ್ನು ಆರೋಪಿ ತಯಾರಿಸುತ್ತಿದ್ದ. ಬೆಂಗಳೂರಿನಲ್ಲಿ ನಾಲ್ಕು ಕಡೆ ನೋಟು ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾದ ನಂತರ ಪೊಲೀಸರು ದಾಳಿ ಮಾಡಿದರು.

ಪಾದರಾಯನಪುರದ ಅರಾಫತ್ ನಗರದಲ್ಲಿನ ಘಟಕದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಖೋಟಾನೋಟು ದಂಧೆ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗ ಮಾಡಿದ್ದಾರೆ.

ಬಿಲ್ ಪೇಪರ್ ಮೂಲಕ ಪ್ರಿಂಟರ್ ಬಳಸಿ ನೋಟ್ ತಯಾರಿಸಲಾಗುತ್ತುತ್ತು. ಅರಾಫತ್ ನಗರದ ಮನೆಯಲ್ಲಿ ಪ್ರಿಂಟರ್ ಬಳಸಿ ನೂರು ರೂ. ಮುಖ ಬೆಲೆಯ ನಕಲಿ ನೋಟ್ ತಯಾರಿಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅರಾಫತ್ ನಗರದ ದಾಳಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಮುಂದುವರೆಸಿದ್ದಾರೆ. ವಿಲ್ಸನ್ ಗಾರ್ಡನ್ ಇನ್ಸ್ ಪೆಕ್ಟರ್ ಶಂಕರಾಚಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ 20 ಶೀಟ್ ಖೋಟಾ ನೋಟುಗಳು ಪತ್ತೆಯಾಗಿವೆ. ಒಂದು ಶೀಟ್ ನಲ್ಲಿ ಎರಡು ಹಾಗೂ ಮೂರು ಖೋಟಾ ನೋಟುಗಳಿವೆ. ಒಟ್ಟಾರೆ ಪತ್ತೆಯಾದ ನೋಟುಗಳನ್ನು ಪೊಲೀಸರು ಲೆಕ್ಕ ಹಾಕುತ್ತಿದ್ದಾರೆ.

Share This Article
Leave a comment