ಪಂಜಾಬ್‌ನಲ್ಲಿ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ರು ಉಳಿತಾಯ : ಸಿಎಂ ‌

Team Newsnap
1 Min Read

ಸಿಎಂ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ `ಒಬ್ಬ ಶಾಸಕ-ಒಂದು ಪಿಂಚಣಿ’ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದರಿಂದ 5ವರ್ಷಗಳಲ್ಲಿ 100 ಕೋಟಿ ಉಳಿತಾಯ ಮಾಡಲಿದೆ.

ಮಾಜಿ ಶಾಸಕರಿಗೆ (ಎಂಎಲ್‌ಎ) ಬಹು ಪಿಂಚಣಿಗಳನ್ನು ಸೀಮಿತಗೊಳಿಸುವ ಮಸೂದೆಗೆ ಪಂಜಾಬ್ ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡಿದ ನಂತರ ಎಎಪಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, 5 ವರ್ಷಗಳಲ್ಲಿ 100 ಕೋಟಿ ಉಳಿತಾಯವಾಗಲಿದೆ.

ಒಂದು ಶಾಸಕ-ಒಂದು ಪಿಂಚಣಿ ಯೋಜನೆಯು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಭಗವಂತ್ ಮಾನ್ ಹೇಳಿದರು.

ರಾಜ್ಯ ವಿಧಾನಸಭೆಯ ಸದಸ್ಯರಿಗೆ ಒಂದೇ ಅವಧಿಗೆ ಪ್ರತಿ 60,000 ರೂಪಾಯಿಗಳ ಹೊಸ ದರದಲ್ಲಿ ಮಾತ್ರ ಪಿಂಚಣಿ ನೀಡುವ ಗುರಿಯನ್ನು ಹೊಂದಿದೆ. ಇದಕ್ಕೆ ಪಂಜಾಬ್ ರಾಜ್ಯಪಾಲರೂ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನು ಓದಿ – ಉದ್ಯಮಿ, ಹೂಡಿಕೆದಾರ ರಾಕೇಶ್ ಝಂಝನವಾಲ ಹೃದಯಾಘಾತದಿಂದ ನಿಧನ

ಈ ಮೂಲಕ ರಾಜ್ಯ ಸರ್ಕಾರಕ್ಕೆ ವಾರ್ಷಿಕ 19.53 ಕೋಟಿ ರೂ. ಉಳಿತಾಯವಾಗಲಿದೆ. ಒಟ್ಟಾರೆ 5 ವರ್ಷಗಳಲ್ಲಿ ಸುಮಾರು 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತರೂ ಕೆಲವರು 3.50 ರಿಂದ 5 ಲಕ್ಷ ರೂ. ವರೆಗೂ ಪಿಂಚಣಿ ಪಡೆಯುತ್ತಿದ್ದಾರೆ. ಲಾಲ್‌ಸಿಂಗ್, ಸರ್ವಾನ್‌ಸಿಂಗ್ ಫಿಲೌ ಹಾಗೂ ರಾಜಿಂದರ್ ಕೌರ್ ಭಟ್ಟಾಲ್ ತಿಂಗಳಿಗೆ 3.55 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ರವಿಂದರ್ ಸಿಂಗ್, ಬೈಲ್ವಿಂದರ್ ಸಿಂಗ್ 2.75 ಲಕ್ಷ ಹಾಗೂ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ 5 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರು ಆರ್ಥಿಕ ಹೊರೆಯಾಗುತ್ತಿದೆ ಎಂದು ಆತಂಕಪಟ್ಟಿದ್ದರು. ಇದನ್ನು ಓದಿ – ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರ ಕೃತ್ಯ

Share This Article
Leave a comment