ಕೊಡಗು ಮಹಿಳಾ ಕಾಫಿ ಜಾಗೖತಿ ಸಂಘದ 18 ನೇ ವಾಷಿ೯ಕ ಮಹಾಸಭೆ

Team Newsnap
3 Min Read

ಕೊಡಗಿನಲ್ಲಿ ನೈಸಗಿ೯ಕ ಕಾಫಿ ಉತ್ಪಾದನೆಗೆ ಆದ್ಯತೆ ನೀಡಿ – ಡಾ.ಸಿ.ಜಿ.ಕುಶಾಲಪ್ಪ

  • ಕೊಡಗು ಮಹಿಳಾ ಕಾಫಿ ಜಾಗೖತಿ ಸಂಘದ 18 ನೇ ವಾಷಿ೯ಕ ಮಹಾಸಭೆ

ಕಾಫಿಯ ಉತ್ತಮ ಸ್ವಾದಕ್ಕೆ ಗ್ರಾಹಕರು ಮನಸೋತರೆ ಮಾತ್ರ ಜಾಗತಿಕವಾಗಿ ಕಾಫಿ ಬೆಳೆಗೆ ಉತ್ತಮ ದರ ದೊರಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೈಸಗಿ೯ಕವಾಗಿ ಕಾಫಿ ಬೆಳೆಸುವತ್ತ ಬೆಳೆಗಾರರು ಗಮನ ಹರಿಸಬೇಕೆಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಕರೆ ನೀಡಿದರು.

kodagu1

ಹೊರವಲಯದಲ್ಲಿನ ಕ್ಯಾಪಿಟಲ್ ರೆಸಾಟ್೯ ನಲ್ಲಿ ಕೊಡಗು ಮಹಿಳಾ ಕಾಫಿ ಜಾಗೖತಿ ಸಂಘಧ 18 ನೇ ವಾಷಿ೯ಕ ಮಹಾಸಭೆಯಲ್ಲಿ ಮಾತನಾಡಿದ ಡಾ.ಸಿ.ಜಿ.ಕುಶಾಲಪ್ಪ, ವಿಯೆಟ್ನಾಂ, ಬ್ರಿಜೆಲ್ ದೇಶಗಳು ಬೃಹತ್ ಪ್ರಮಾಣದಲ್ಲಿ ಕಾಫಿಯ ಉತ್ಪಾದನೆ ಮಾಡಿದರೂ ಕೂಡ ಕಾಫಿ ಕೃಷಿಗೆ ಹೂಡಿಕೆ ಮಾಡಿದ ಮೂಲ ಬಂಡವಾಳವೇ ಅವರ ಕೈಗೆ ಎಟುಕುತ್ತಿಲ್ಲ. ಆ ದೇಶಗಳಲ್ಲಿ ಕಾಫಿ ಕೖಷಿಗೆ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಕೊಡಗಿನ ಕಾಫಿ ಬೆಳೆಗಾರರು ಕೂಡ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕವಾಗಿ ಕಾಫಿ ಕೃಷಿಯಲ್ಲಿ ತೊಡಗ ಬೇಕು. ಕೊಡಗು ಜಿಲ್ಲೆಯಲ್ಲಿ ನೈಸರ್ಗಿಕ ಅರಣ್ಯದಿಂದ ಆವೃತವಾದ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯುತ್ತಿದ್ದು, 360 ತಳಿಯ ವೈವಿಧ್ಯಮಯ ಮರಗಳು ಕೊಡಗಿನ ಕಾಫಿ ತೋಟಗಳಲ್ಲಿವೆ. ಇದರಿಂದ ವಿಶ್ವ ಗುಣಮಟ್ಟದ ಕಾಫಿಯನ್ನು ಬೆಳೆಯಲು ಕೊಡಗಿನ ಕಾಫಿ ಬೆಳೆಗಾರರಿಗೆ ಸಾಧ್ಯವಾಗಲಿದೆ. ಈ ರೀತಿಯಾಗಿ ಬೆಳೆಯುವ ಕಾಫಿಗೆ ವಿಶ್ವ ಮಾನ್ಯತೆಯೂ ಇದ್ದು, ಉತ್ತಮ ಬೆಲೆಯೂ ದೊರಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಫಿ ಮಂಡಳಿಯ ಗುಣಮಟ್ಟ ತಜ್ಞ ವಿಕ್ರಂ ಕುಟ್ಟಯ್ಯ ಮಾತನಾಡಿ,ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದರೂ ವಾಣಿಜ್ಯ ಬೆಳೆಯಾದ ಕಾಫಿ ಫಸಲಿನ ಬೆಲೆಯಲ್ಲಿ ಕಳೆದ 25 ವಷ೯ಗಳಲ್ಲಿ ಯಾವುದೇ ಗಮನಾಹ೯ ಏರಿಕೆಯಾಗದೇ ಇರುವುದು ಬೆಳೆಗಾರರು ಚಿಂತಿಸಲೇಬೇಕಾದ ವಿಚಾರವಾಗಿದೆ ಎಂದು ಹೇಳಿದರು.

ವಿಶ್ವದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿಯ ಬೆಲೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚದೇ ಇರುವುದು ಕಳವಳಕಾರಿಯಾಗಿದೆ. 25 ವಷ೯ಗಳ ಹಿಂದೆ ಅರೇಬಿಕಾ ಕಾಫಿ ತೋಟ ನಿವ೯ಹಣೆಗೆ 25 ಸಾವಿರ ರು. ಇದ್ದದ್ದು ಈಗ 80 ಸಾವಿರ ರು. ಗೆ ತಲುಪಿದೆ. ರೋಬಸ್ಟಾ ಕಾಫಿ ನಿವ೯ಹಣೆ 15 ಸಾವಿರ ರು. ಇದ್ದದ್ದು ಈಗ 60 ಸಾವಿರ ರು. ಗೆ ಹೆಚ್ಚಾಗಿದೆ. ಚಿನ್ನದ ಬೆಲೆ 9 ಸಾವಿರ ರು. ನಿಂದ 50 ಸಾವಿರ ರು. ಗೆ ಏರಿಕೆಯಾಗದೆ. ಹೀಗಿದ್ದರೂ ಕಾಫಿಯ ಬೆಲೆ ಮಾತ್ರ 25 ವಷ೯ಗಳಲ್ಲಿ ಹೆಚ್ಚಿನ ಏರಿಕೆಯಾಗಲೇ ಇಲ್ಲ. ಕಾಫಿ ಕೖಷಿ ತೋಟದ ನಿವ೯ಹಣಾ ವೆಚ್ಚ ಮತ್ತು ಅದರಿಂದ ಬರುವ ಆದಾಯದ ಹೋಲಿಕೆಯಲ್ಲಿ ತಾಳಮೇಳವೇ ಇಲ್ಲದಂಥ ದುಸ್ಥಿತಿಯಿದೆ ಎಂದೂ ವಿಕ್ರಂ ಕುಟ್ಟಯ್ಯ ವಿಶ್ಲೇಷಿಸಿದರು

ಕೊಡಗು ಮಹಿಳಾ ಕಾಫಿ ಜಾಗೖತಿ ಸಂಘದ ಅಧ್ಯಕ್ಷೆ ಪಂದಿಕುತ್ತೀರ ಚಿತ್ರಾಸುಬ್ಬಯ್ಯ ಮಾತನಾಡಿ, ತಮ್ಮ ಸಂಘವು ಸತತ 18 ವಷ೯ಗಳಿಂದ ಕಾಫಿಯ ಮಹತ್ವದ ಬಗ್ಗೆ ಹಲವೆಡೆ ತಿಳುವಳಿಕೆ ಮೂಡಿಸುವ ಕಾಯ೯ದಲ್ಲಿ ಸಕ್ರಿಯವಾಗಿದೆ. ಮಹಿಳೆಯರ ಈ ಸಂಘ ವಿಶಿಷ್ಟ ಕಾಯ೯ಚಟುವಟಿಕೆಗಳಿಗೆ ಹೆಸರಾಗಿದೆ. ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘವನ್ನು ಸದಸ್ಯೆಯರಾಗಿ ಸೇಪ೯ಡೆಯಾಗುತ್ತಿರುವುದು ಕಾಫಿ ಉದ್ಯಮಕ್ಕೆ ಆಶಾಭಾವನೆ ಮೂಡಿಸುವಂತಿದೆ ಎಂದರು.

kodagu2

ಮಡಿಕೇರಿ ರಾಜಾಸೀಟ್ ನಲ್ಲಿ ಕೊಡಗು ಜಿಲ್ಲಾಡಳಿತ ಪ್ರಾರಂಭಿಸುತ್ತಿರುವ ಕೂಗ್೯ವಿಲೇಜ್ ನಲ್ಲಿ ಕಾಫಿ ಮಂಡಳಿ ಸಹಯೋಗದಲ್ಲಿ ತಮ್ಮ ಸಂಘದ ನಿದೇ೯ಶಕಿ ಕುಮಾರಿ ಕುಂಜ್ಞಪ್ಪ ಕಾಫಿ ಮಳಿಗೆಯನ್ನು ಪ್ರಾರಂಭಿಸಲಿದ್ದು ಈ ಮೂಲಕ ಕೂಗ್೯ ವಿಲೇಜ್ ನಲ್ಲಿ ಕೊಡಗಿನ ಕಾಫಿಗೇ ವಿಶೇಷ ಮಳಿಗೆ ಲಭಿಸುತ್ತಿರುವುದು ಸ್ವಾಗತಾಹ೯ ಬೆಳವಣಿಗೆಯಾಗಿದೆ ಎಂದೂ ಚಿತ್ರಾ ಸುಬ್ಬಯ್ಯ ಹಷ೯ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾಯ೯ದಶಿ೯ ಅಪ್ಪನೆರವಂಡ ಅನಿತಾ ನಂದ, ಜಂಟಿ ಕಾಯ೯ದಶಿ೯ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ,ಸೇರಿದಂತೆ ನಿದೇ೯ಶಕಿಯರು ಪಾಲ್ಗೊಂಡಿದ್ದರು. ತೇಲಪಂಡ ಶರಿನ್ ನಂಜಪ್ಪಪ್ರಾಥಿ೯ಸಿದರು. ಬಲ್ಲನಮಾಡ ರೀಟಾ ವಂದಿಸಿದರು.

Share This Article
Leave a comment