ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ; ಸಿಎಂ ಘೋಷಣೆ

Team Newsnap
1 Min Read

7 ನೇ ವೇತನ ಆಯೋಗದ ವರದಿ ಜಾರಿ ಸೇರುವಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದಿನಿಂದ ಮುಷ್ಕರಕ್ಕೆ ಬೆದರಿದ ರಾಜ್ಯ ಸರ್ಕಾರ ತುರ್ತು ನಿರ್ಧಾರ ತೆಗೆದುಕೊಂಡು ತಕ್ಷಣವೇ ಸರ್ಕಾರಿ ನೌಕರರ ವೇತನದಲ್ಲಿ ಶೇ.17ರಷ್ಟು ಹೆಚ್ಚಳ ಮಾಡಿದೆ.

ಈ ಕುರಿತಂತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಮಧ್ಯಂತರ ಪರಿಹಾರ ವೇತನ ಘೋಷಣೆ ಮಾಡಿದ್ದೇವೆ. ವರದಿ ಬಂದ ತಕ್ಷಣ ಏಳನೇ ವೇತನ ಆಯೋಗದ ವೇತನ ಜಾರಿ ಮಾಡಲಿದ್ದೇವೆ ಎಂದರು.

ಎನ್‌ಪಿಎಸ್‌ ರದ್ದು ಮಾಡುವ ಬಗ್ಗೆ ಸಮಿತಿ ರಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು .

ನೌಕರರು ಮುಷ್ಕರ ಕೈಬಿಡುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು, ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಆದೇಶ ಆಗುವವರೆಗೂ ಮುಷ್ಕರ ಹಿಂಪಡೆಯವುದಿಲ್ಲ. ಸರ್ಕಾರ ಆದೇಶ ಹೊರಡಿಸಿದ ನಂತರ ಎಲ್ಲರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.ಕೋವಿಡ್ ವ್ಯಾಕ್ಸಿನೇಷನ್ ನಂತರ ಹೃದಯಾಘಾತ ಶೇ4-5 ಹೆಚ್ಚು : ಸೌಮ್ಯ

Share This Article
Leave a comment