15 ಸಾವಿರ ರು ಲಂಚ ಸ್ವೀಕಾರ ಮಹಿಳಾ ಪಿಎಸ್ಐ ಸವಿತಾ ‘ಲೋಕಾ’ ಬಲೆಗೆ

Team Newsnap
1 Min Read

ಆರೋಪಿಗೆ ಜಾಮೀನು ನೀಡಲು 15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌’ವೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.

ಎಸ್ ಐ ಸವಿತಾ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್ಐ ಎಂಬುದಾಗಿ ತಿಳಿದುಬಂದಿದೆ.

ಪೋಲಿಸ್ ವಶದಲ್ಲಿದ್ದ ಆರೋಪಿಯೊಬ್ಬನ ಜಾಮೀನು ಸ್ವೀಕರಿಸಲು 50 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಸವಿತಾಗೆ ಆರೋಪಿಯ ಕಡೆಯವರು ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದರು.

ಅಂತಿಮವಾಗಿ 15 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಸವಿತಾ ವಿರುದ್ಧ ಆರೋಪಿ ಕಡೆಯವರಾದ ಅನಂತ್ ಕುಮಾರ್ ದೂರು ನೀಡಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಸವಿತಾ ಅವರನ್ನು ಬಂಧನಕ್ಕೊಳಪಡಿಸಲು ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು.ಜೆಡಿಎಸ್ ಯುವ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ರಾಜೀನಾಮೆ

ಹಣ ಸ್ವೀಕರಿಸುತ್ತಿದ್ದ ವೇಳೆ ಸವಿತಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಲೋಕಾಯುಕ್ತ ಪೊಲೀಸರು ಸವಿತಾ ಅವರನ್ನು ಬಂಧಿಸಿದ್ದಾರೆ.

Share This Article
Leave a comment