ಮುಂಬೈ, ಫೆಬ್ರವರಿ 4: ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜಿಯೋ), ಪ್ರಣವ್ ಮಿಸ್ತ್ರಿ ಸ್ಥಾಪಿಸಿದ ಸಿಲಿಕಾನ್ ವ್ಯಾಲಿ ಮೂಲದ ಟೆಕ್ ಸ್ಟಾರ್ಟಪ್ ಟೂ ಪ್ಲಾಟ್‌ಫಾರ್ಮ್ಸ್‌ನಲ್ಲಿ (TWO) 15 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ಘೋಷಿಸಿದೆ. ಅದು ಕಂಪೆನಿಯ ಶೇ 25ರಷ್ಟು ಸಾಮಾನ್ಯ ಈಕ್ವಿಟಿ ಷೇರುಗಳನ್ನು ಖರೀದಿಸುತ್ತಿದೆ.
ಟೂ ಒಂದು ಆರ್ಟಿಫಿಷಿಯಲ್ ರಿಯಾಲಿಟಿ ಕಂಪೆನಿಯಾಗಿದ್ದು, ಕೃತಕ ಬುದ್ಧಿಮತ್ತೆಯ ಅನುಭವಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ.
ಹೊಸ ತಂತ್ರಜ್ಞಾನಗಳ ಅಳವಡಿಕೆಯನ್ನು ಹಾಗೂ ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಮಿಕ್ಸ್ಡ್ ರಿಯಾಲಿಟಿಗಳಂತಹ ತಂತ್ರಜ್ಞಾನಗಳ ನಿರ್ಮಾಣವನ್ನು ಚುರುಕುಗೊಳಿಸಲು ಜಿಯೋದೊಂದಿಗೆ ಜತೆಗೂಡಿ ಟೂ ಕಾರ್ಯನಿರ್ವಹಿಸಲಿದೆ.
ಹೂಡಿಕೆ ಬಗ್ಗೆ ಮಾತನಾಡಿದ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, ‘ಎಐ/ ಎಂಎಲ್, ಎಆರ್, ಮೆಟಾವರ್ಸ್ ಮತ್ತು ವೆಬ್ 3.0 ಕ್ಷೇತ್ರಗಳಲ್ಲಿನ ಟೂ ತಂಡದ ದೊಡ್ಡ ಅನುಭವ ಹಾಗೂ ಸಾಮರ್ಥ್ಯಗಳಿಂದ ನಾವು ಪ್ರಭಾವಿತರಾಗಿದ್ದೇವೆ. ಇಂಟರ್ಯಾಕ್ಟೀವ್ ಎಐ, ಇಮ್ಮರ್ಸಿವ್ ಗೇಮಿಂಗ್ ಮತ್ತು ಮೆಟಾವರ್ಸ್ ವಿಭಾಗಗಳಲ್ಲಿ ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ನಡೆಸಲು ನೆರವಾಗಲು ಟೂ ಜತೆಗೂಡಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದರು.
‘ಭಾರತದ ಡಿಜಿಟಲ್ ಪರಿವರ್ತನೆಗೆ ಜಿಯೋ ಒಂದು ಬುನಾದಿಯಾಗಿದೆ. ಎಐನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಗ್ರಾಹಕರು ಹಾಗೂ ಉದ್ಯಮಗಳಲ್ಲಿ ಆರ್ಟಿಫಿಷಿಯಲ್ ರಿಯಾಲಿಟಿಯ ಆಪ್ಲಿಕೇಷನ್‌ಗಳನ್ನು ಪರಿಚಯಿಸಲು ಜಿಯೋ ಜತೆ ಪಾಲುದಾರಿಕೆ ಹೊಂದಲು ಟೂ ಕಂಪೆನಿ ಉತ್ಸುಕವಾಗಿದೆ’ ಎಂದು ಟೂ ಸಿಇಒ ಪ್ರಣವ್ ಮಿಸ್ತ್ರಿ ಹೇಳಿದರು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ