ಕಾಬೂಲ್ ನಲ್ಲಿ ಉಗ್ರರಿಂದ ಸರಣಿ ಬಾಂಬ್ ಸ್ಫೋಟ – 13 ಮಂದಿ ಸಾವು : 52 ಮಂದಿ ಗಾಯ

Team Newsnap
1 Min Read

ಅಫ್ಘಾನಿಸ್ತಾನದಲ್ಲಿ ಎರಡು ಕಡೆ ತಾಲಿಬಾನಿಗಳ ಬಾಂಬ್ ದಾಳಿ ನಡೆಸಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. 52 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೂವರು ಅಮೇರಿಕಾದ ಸೈನಿಕರು , ಬ್ರಿಟನ್, ಮಾತ್ರವಲ್ಲದೇ ಅಫ್ಘಾನಿಸ್ತಾನದ ಪ್ರಜೆಗಳು ಗಂಭೀರ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಉಗ್ರರ ಹಿಂಸೆ ನಡುವೆಯೂ ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ಬಾಂಬ್ ಗಳ ಸರಣಿ ಸ್ಪೋಟ ಮಾಡಲಾಗಿದೆ.

ಅಲ್ಲದೇ ಅಮೇರಿಕಾ, ಬ್ರಿಟಿಷ್‌ ಸೈನಿಕರು ಉಳಿದು ಕೊಂಡಿರುವ ಬ್ಯಾರನ್ ಹೋಟೆಲ್ ಬಳಿ ಬಾಂಬ್ ಸ್ಪೋಟ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ 13 ಮಂದಿ ಮೃತಪಟ್ಟಿದ್ದಾರೆ. ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ತಾಲಿಬಾನಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಎಚ್ಚರಿಕೆ ನೀಡಿತ್ತು. ಅಮೆರಿಕ ಕೂಡ ಕಾಬೂಲ್ ವಿಮಾನ ನಿಲ್ದಾಣದಿಂದ ದೂರ ಇರುವಂತೆ ಎಚ್ಚರಿಸಿತ್ತು. ಈ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆದಿದೆ. 

ಯಾರೂ ದೇಶಬಿಟ್ಟು ಹೋಗಬೇಡಿ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ತಾಲಿಬಾನಿಗಳು ಆಫ್ಘನ್ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಾವಿರಾರು ಜನರು ವಿದೇಶಕ್ಕೆ ತೆರಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿರುವ ಹಿನ್ನೆಲೆಯಲ್ಲಿ ಭಯ ಹುಟ್ಟಿಸಲು ಉಗ್ರರು ಈ ಬಾಂಬ್ ದಾಳಿ ನಡೆಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ಆಗಿರುವುದನ್ನು ಅಮೆರಿಕ ದೃಢಪಡಿಸಿದೆ. ಈ ಸಮಯದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ ಎಂದು ಪೆಂಟಗನ್ ತಿಳಿಸಿದೆ.

Share This Article
Leave a comment