ಬಹುಭಾಷಾ ನಟಿ ಪ್ರಣೀತಾ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ಹೇಳಿ ಕಂಪನಿಯೊಂದರ ಮ್ಯಾನೇಜರ್ 13 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚೆನ್ನೈ ಮೂಲದ ಮೊಹಮ್ಮದ್ ಜುನಾಯತ್ ಎಂಬಾತ ಡೆವಲಪರ್ ಕಂಪನಿಯ ಮ್ಯಾನೇಜರ್ ಗೆ ಪರಿಚಯವಾಗಿದ್ದರು. ತಾನು ನಟಿ ಪ್ರಣೀತಾರನ್ನು ತಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ಹೇಳಿದ್ದಾನೆ. ಆರೋಪಿಗಳಾದ ವರ್ಷಾ, ಮೊಹಮ್ಮದ್ ಜುನಾಯತ್ ಮಾತಿಗೆ ಮರುಳಾದ ಕಂಪನಿಯ ಮ್ಯಾನೇಜರ್ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾತುಕತೆಗೆ ಸ್ಥಳ ಕೂಡ ಫಿಕ್ಸ್ ಮಾಡಿದ್ದಾರೆ. ನಾವು ನಿಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಪ್ರಣೀತಾರನ್ನು ಮಾಡುತ್ತೇವೆ ಎಂದು ಆರೋಪಿಗಳು ಒಪ್ಪಿಸಿದ್ದಾರೆ.
ವಂಚಕರ ಮಾತಿಗೆ ಮರುಳಾದ ಮ್ಯಾನೇಜರ್ 13 ಲಕ್ಷ ಹಣವನ್ನು ಕೊಟ್ಟಿದ್ದಾರೆ. ಹಣ ಪಡೆದು ಇಬ್ಬರು ಹೊಟೇಲ್ ನ ರೂಂಗೆ ಹೋಗಿ ಬರುತ್ತೇವೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಡೆವಲಪರ್ ಕಂಪನಿಯ ಮ್ಯಾನೇಜರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು