ಎರಡು ಬ್ಯಾಂಕ್ ಗಳಿಗೆ 129 ಕೋಟಿ ವಂಚನೆ : ಸಿಬಿಐ 7 ಕಡೆ ದಾಳಿ

Team Newsnap
1 Min Read
Gururaghavendra, Vasishtha Souharda Bank scam to be investigated by CBI: Minister S.T. S ಗುರುರಾಘವೇಂದ್ರ, ವಸಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐ ತನಿಖೆಗೆ : ಸಚಿವ ಎಸ್.ಟಿ. ಎಸ್

ಎರಡು ಪ್ರತ್ಯೇಕ ಬ್ಯಾಂಕ್ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಏಳು ಕಡೆ ಕಳೆಧ ರಾತ್ರಿ ಸಿಬಿಐ ದಾಳಿ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡ ಗೆ ಸುಮಾರು 129 ಕೋಟಿ ರುಗಳಷ್ಟು ವಂಚನೆ ಮಾಡಿದ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾ ಗೆ 71.88 ಕೋಟಿ ರೂಪಾಯಿ ಗಳನ್ನು ವಂಚಿಸಿರುವ ಸಯಾನಾ ಕಲಸ್೯ ಪ್ರೈವೇಟ್ ಲಿಮಿಟೆಡ್ ಕಚೇರಿ ಮತ್ತು ವಸತಿ ಸಮುಚ್ಚಯ ಗಳ ಅಹಮದಾಬಾದ್ ಹಾಗೂ ಗುಜರಾತ್ ನ 4 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಎಸ್ ಬಿಐ ಡಿಸೆಂಬರ್ 7 ರಂದು ಸಿಬಿಐ ಗೆ ದೂರಿನ ಅನ್ವಯ ಈ ದಾಳಿ ನಡೆದಿದೆ.

ಮತ್ತೊಂದು ಪ್ರಕರಣದಲ್ಲಿ ಬ್ಯಾಂಕ್ ಆಫ್ ಬರೋಡ ಡಿ. 2 ರಂದು ನೀಡಿದ್ದ ದೂರಿನಂತೆ 57. 28‌ ಕೋಟಿ ರೂಪಾಯಿಗಳ ವಂಚನೆಗೆ ಸಂಬಂಧ ಅಹಮದಾಬಾದ್, ಮುಂಬಯಿ ಹಾಗೂ ಬೆಂಗಳೂರಿನ ಮೂರು ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಟೆಕ್ನೋವಾ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಹ್ಸಾನ್ ಹಸನ್ ದರ್ವೇಶ್ , ಕಂಪನಿ ನಿರ್ದೇಶಕ ತಲೀಬ್ ಹಸನ್ ದರ್ವೇಶ್ ಮತ್ತು ಅಬ್ದುಲ್ ಹಬೀಬ್ ಅವರುಗಳು ಸೇರಿಕೊಂಡು ಬ್ಯಾಂಕ್ ಗೆ 57. 28 ಕೋಟಿ ರೂಪಾಯಿ ಗಳನ್ನು ವಂಚನೆ ಮಾಡಿದ್ದಾರೆಂದು ದೂರು ದಾಖಲಾಗಿದೆ.

Share This Article
Leave a comment