February 22, 2026

Newsnap Kannada

The World at your finger tips!

river

ನದಿಯಲ್ಲಿ ಸ್ನಾನ ಮಾಡಲು ಹೋದ ಒಂದೇ ಕುಟುಂಬದ 12 ಮಂದಿ ಜಲ‌ ಸಮಾಧಿ‌

Spread the love

ಸರಯೂ ನದಿಯಲ್ಲಿ ಸ್ನಾನ ಮಾಡಲು ಹೋದ ಒಂದೇ ಕುಟುಂಬದ 12 ಮಂದಿ ಜಲ ಸಮಾಧಿಯಾದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಜರುಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಲುವಾಗಿ ಆಗ್ರಾ ಮೂಲದ ಒಂದೇ ಕುಟುಂಬದ 15 ಮಂದಿ ಆಗಮಿಸಿದ್ದರು.

ಸರಯೂ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆಯಲ್ಲಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಯಿತು. ಓರ್ವ ವ್ಯಕ್ತಿ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಇದರಿಂದಾಗಿ ಕೊಚ್ಚಿ ಹೋದಾತನ ರಕ್ಷಣೆಗೆ ಇಳಿದ ಇತರರು ಕೂಡ ನೀರುಪಾಲಾಗಿದ್ದಾರೆ.

ಕೂಡಲೇ ರಕ್ಷಣೆಗೆ ಧಾವಿಸಿದ ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.

error: Content is protected !!