ಬೆಂಗಳೂರಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬ್ಯಾಡರಹಳ್ಳಿ ಪೋಲಿಸರು ಭಾನುವಾರ ಮನೆ ಮಹಜರ್ ಮಾಡುವ ಕಾರ್ಯ ಆರಂಭಿಸಿದ್ದಾರೆ.
ಶಂಕರ್ ಭವ್ಯ ಬಂಗಲೆಯಲ್ಲಿ 12 ಲಕ್ಷ ರು ಕ್ಯಾಷ್ , 1 ಕೆಜಿ ಚಿನ್ನ, 3 ಡೆತ್ ನೋಟ್ ಪತ್ತೆ ಯಾಗಿದೆ, 4 ಮೊಬೈಲ್ ಪೋನ್ , 3 ಲ್ಯಾಪ್ ಟ್ಯಾಪ್ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗ ಮೂವರು ಪ್ರತ್ಯೇಕ ಡೆತ್ ನೋಟ್ ಬರೆದಿದ್ದಾರೆ.
ಪುತ್ರ ಸಾಗರ್ ಬರೆದ ನೋಟ್ ನಲ್ಲಿ ನನ್ನ ತಂದೆಗೆ ಅನೈತಿಕ ಸಂಬಂಧ ವಿತ್ತು. ಹಣಕಾಸಿನ ವಿಚಾರಕ್ಕೆ ಗಲಾಟೆ ಆಗುತ್ತಲೇ ಇತ್ತು ಎಂದು ಬರೆದಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ಬರೆದ ಪತ್ರದಲ್ಲಿ ನಾವು ತಂದೆ ಮನೆಯಲ್ಲೂ ಹಾಗೂ ಗಂಡ ಮನೆಯಲ್ಲೂ ನೆಮ್ಮದಿ ಯಿಂದ ಇರಲಿಲ್ಲ. ಇನ್ನೂ ಅನೇಕ ವಿಚಾರಗಳನ್ನು ನಾವು ಲ್ಯಾಪ್ ಟಾಪ್ ನಲ್ಲಿ ಬರೆದಿದ್ದೇವೆ ಎಂದು ಹೇಳಿದ್ದಾರೆ.
ಈ ನಡುವೆ ಶಂಕರ್ ಹಾಗೂ ಅಳಿಯಂದಿರ ವಿರುದ್ದ ಡೆತ್ ನೋಟ್ ನಲ್ಲಿ ಸಾಕಷ್ಟು ಸಂಗತಿಗಳನ್ನು ಬರೆದಿರುವ ಹಿನ್ನೆಲೆಯಲ್ಲಿ ಶಂಕರ್ ಹಾಗೂ ಅಳಿಯಂದಿರನ್ನು ಪೋಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಶಂಕರ್ ಆಸ್ತಿ ಹಾಗೂ ಹಣ ಸಂಪಾದನೆಯ ಮೂಲವನ್ನು ಪೋಲಿಸರು ಹುಡುಕಾಟ ಮಾಡುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು