March 13, 2026

Newsnap Kannada

The World at your finger tips!

karona

ರಾಜ್ಯದಲ್ಲಿ ಕೊರೊನಾ 1,187 : ಬೆಂಗಳೂರಿನಲ್ಲಿ 923 ಕೇಸ್ – ಸಕ್ರಿಯ ಪ್ರಕರಣ 10,292ಕ್ಕೆ ಏರಿಕೆ

Spread the love

ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಏರಿಕೆಯಾಗುತ್ತಿದೆ.

ಭಾನುವಾರ ಒಟ್ಟು 1,187 ಕೇಸ್ ದಾಖಲಾಗಿದೆ. 6 ಮರಣ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 923 ಕೇಸ್ ದಾಖಲಾಗುವ ಮೂಲಕ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 10,292ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು ಒಟ್ಟು 275 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 30,09,557 ಮಂದಿಗೆ ಕೊರೊನಾ ಬಂದಿದೆ.

ಕೋವಿಡ್-19 ಮರಣ ಪ್ರಮಾಣ ಶೇ.0.50 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.1.08 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 923 ಪಾಸಿಟಿವ್ ಕೇಸ್ ದಾಖಲಾಗಿದ್ದು, 125 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 3 ಮರಣ ಪ್ರಕರಣ ದಾಖಲಾಗಿದೆ. ಓಮಿಕ್ರಾನ್‌ ಒಟ್ಟು ಪ್ರಕರಣ 66 ಸ್ಥಿರವಾಗಿದೆ.

error: Content is protected !!