ನಕ್ಸಲರ ಅಟ್ಟಹಾಸ-‘ಐಇಡಿ’ ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

Team Newsnap
1 Min Read

ಛತ್ತೀಸ್‌ಗಢದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಚಾಲಕ ಹಾಗೂ 10 ಪೊಲೀಸ್‌ ಸಿಬ್ಬಂದಿ ಸೇರಿ 11 ಯೋಧರು ಹುತಾತ್ಮರಾದ ಘಟನೆ ಗುರುವಾರದಲ್ಲಿ ದಾಂತೇವಾಡದಲ್ಲಿ ಜರುಗಿದೆ.

ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಗುಪ್ತಚರ ಮಾಹಿತಿಯ ಮೇರೆಗೆ ಪ್ರಾರಂಭವಾದ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಿಂದ ಪೊಲೀಸರು ಹಿಂತಿರುಗುತ್ತಿದ್ದರು.ಈ ವೇಳೆ ಘಟನೆ ನಡೆದಿದೆ. ಯೋಧರು ಸಂಚರಿಸುತ್ತಿದ್ದ ವಾಹನವನ್ನು ನಕ್ಸಲರು ಐಇಡಿಯಿಂದ ದಾಳಿ ನಡೆಸಿ ಸ್ಫೋಟಿಸಿದ್ದಾರೆ. ಪರಿಣಾಮವಾಗಿ 10 ಭದ್ರತಾ ಸಿಬ್ಬಂದಿ ಮತ್ತು ಚಾಲಕ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿ, ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಅವರು, ದಾಳಿಯಲ್ಲಿ ಭಾಗಿಯಾಗಿರುವ ನಕ್ಸಲರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಹೋರಾಟವು ಕೊನೆಯ ಹಂತದಲ್ಲಿದೆ. ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ನಕ್ಸಲ್‌ ನಿಗ್ರಹ ದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a comment