December 23, 2024

Newsnap Kannada

The World at your finger tips!

gold card

1,000 ಗೋಲ್ಡ್ ಕಾರ್ಡ್ ಸೇಲ್ : 89 ಲಕ್ಷ ವರಮಾನ

Spread the love

ಮೈಸೂರು ದಸರಾ: ಜಿಲ್ಲಾಡಳಿತವು ಮೈಸೂರು ದಸರಾ ಅಂಗವಾಗಿ ಬುಧವಾರ ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಿದ 1 ಸಾವಿರ ಗೋಲ್ಡ್‌ ಕಾರ್ಡ್‌ ಹಾಗೂ ಜಂಬೂಸವಾರಿ ಮತ್ತು ಪಂಜಿನ ಕವಾಯತು ಪ್ರದರ್ಶನದ ತಲಾ 2ಸಾವಿರ ಟಿಕೆಟ್‌ಗಳು ಒಂದೇ ತಾಸಿನಲ್ಲೇ ಬಿಕರಿಯಾಗಿವೆ. ಇದರಿಂದ ₹89 ಲಕ್ಷ ವರಮಾನ ಬಂದಿದೆ.ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅರಮನೆ ಆವರಣದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯ ವೀಕ್ಷಣೆಗೆ 3 ಸಾವಿರ ರೂಪಾಯಿ ಮುಖಬೆಲೆಯ 400 ಟಿಕೆಟ್​ಗಳು ಹಾಗೂ 2 ಸಾವಿರ ರೂಪಾಯಿ ಮುಖಬೆಲೆಯ 600 ಟಿಕೆಟ್​ಗಳು ಸೇಲ್ ಆಗಿವೆ. ಬನ್ನಿ ಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತು ವೀಕ್ಷಣೆಗೆ 500 ರೂಪಾಯಿ ಮುಖಬೆಲೆಯ 1 ಸಾವಿರ ಟಿಕೆಟ್​ಗಳು ಆನ್​ಲೈನ್​ ಮೂಲಕ ಮಾರಾಟವಾಗಿವೆ.

Copyright © All rights reserved Newsnap | Newsever by AF themes.
error: Content is protected !!