ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿಳಿದ 100 ವೆಂಟಿಲೇಟರ್​, 95 ಆಕ್ಸಿಜನ್ ಕಾನ್ಸೆಂಟ್ರೇಟರ್​​ಗಳು

Team Newsnap
0 Min Read

ಭಾರತದಲ್ಲಿ ಕೊರೋನಾ 2ನೇ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ದೇಶಗಳಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ.

ಭಾರತ ವ್ಯಾಕ್ಸಿನ್ ಪೂರೈಕೆ ಮಾಡಿದ್ದಕ್ಕೆ ಪ್ರತಿಯಾಗಿ ಈಗ ಹಲವು ದೇಶಗಳು ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳಿಸುವ ಮೂಲಕ ಮಾನವೀಯತೆ ಮೆರೆಯುತ್ತಿವೆ.

ಇಂಗ್ಲೆಂಡ್​​ನಿಂದ ಮಂಗಳವಾರ ಬೆಳಿಗ್ಗೆ 100 ವೆಂಟಿಲೇಟರ್‌ಗಳು ಮತ್ತು 95 ಆಮ್ಲಜನಕ ಸಾಂದ್ರಕಗಳು(ಆಕ್ಸಿಜನ್ ಕಾನ್ಸಂಟ್ರೇಟರ್ಸ್​​​​​) ಸೇರಿದಂತೆ ಹಲವು ವೈದ್ಯಕೀಯ ಸಲಕರಣೆಗಳು ಭಾರತಕ್ಕೆ ಬಂದಿವೆ.

ಯುಕೆಯಿಂದ ಹೊರಟ ವಿಮಾನ ಇಂದು ಬೆಳಗ್ಗೆ ಭಾರತಕ್ಕೆ ಬಂದಿಳಿದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

Share This Article
Leave a comment