ಅಂಗಾಂಗಳ ದಾನಕ್ಕೆ 100 ಮಂದಿ ಪ್ರತಿಜ್ಞೆ

Team Newsnap
1 Min Read

ನೈರುತ್ಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಸುಮಾರು 75 ಸಿಬ್ಬಂದಿ ಮತ್ತು ಇತರ ಇಲಾಖೆಗಳ 25 ಉದ್ಯೋಗಿಗಳು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಪ್ರತಿಜ್ಞೆ ಕೈಗೊಂಡರು.


ನೈರುತ್ಯ ರೈಲ್ವೆ (ಮೈಸೂರು ವಿಭಾಗ)ಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ವತಿಯಿಂದ ಮೈಸೂರಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ “ಅಂಗಾಂಗ ದಾನ ಪ್ರತಿಜ್ಞೆ ಮತ್ತು ಜಾಗೃತಿ ಶಿಬಿರ”ದಲ್ಲಿ 100 ಮಂದಿ ತಮ್ಮ ಅಂಗಾಂಗಳ ದಾನಕ್ಕೆ ಪ್ರತಿಜ್ಞೆ ಮಾಡಿದರು.


ಮೈಸೂರು ವಿಭಾಗದ ದಕ್ಷಿಣ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮಾತನಾಡಿದರು. ಮೈಸೂರು ದಕ್ಷಿಣ ವೈದ್ಯಕೀಯ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್. ರಾಮಚಂದ್ರ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮೂತ್ರಶಾಸ್ತ್ರಜ್ಞ ಡಾ. ನಿರಂಜನ್, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್, ಸಹಾಯಕ ಭದ್ರತಾ ಆಯುಕ್ತ ಎ. ಶ್ರೀಧರ್, “ಜೀವನ್ ಸಾರ್ಥಕತೆ” ಸಂಸ್ಥೆಯ ಎ.ವಿ. ಚೂಡೇಶ್, ಚೇತನ್ ಕುಮಾರ್ ಮತ್ತಿತರು ಭಾಗವಹಿಸಿದ್ದರು.


ಅಂಗಾಂಗ ದಾನದ ಮಹತ್ವ ಮತ್ತು ಹೆಚ್ಚಿದ ಸಾರ್ವಜನಿಕ ಜಾಗೃತಿಯ ಅವಶ್ಯಕತೆ ಕುರಿತು ಗಣ್ಯರು ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಕಾರದೊಂದಿಗೆ ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಸಂಸ್ಥೆ “ಜೀವನಸಾರ್ಥಕಥೆ’ ಮೂಲಕ ಈ ಶಿಬಿರವನ್ನು ಏರ್ಪಡಿಸಲಾಗಿತ್ತು.

Share This Article
Leave a comment