February 21, 2026

Newsnap Kannada

The World at your finger tips!

modi vaci

100 ಕೋಟಿ ವ್ಯಾಕ್ಸಿನೇಷನ್: ಭಾರತೀಯ ವಿಜ್ಞಾನದ ವಿಜಯ ಮೋದಿ ಬಣ್ಣನೆ

Spread the love

ಕೊರೊನಾ ವ್ಯಾಕ್ಸಿನೇಷನ್​​ನಲ್ಲಿ ಭಾರತ 100 ಕೋಟಿ ಡೋಸ್​ ಲಸಿಕೆ ವಿತರಣೆ ಮಾಡಿ ಐತಿಹಾಸಿಕ ದಾಖಲೆ ಬರೆದಿದೆ.

ಟ್ವೀಟ್​ ನಲ್ಲಿ ಪ್ರಧಾನಿ ಮೋದಿ ಕೊರೊನಾ ಓಡಿಸಲು ಹಗಲಿರುಳು ದುಡಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದಿಂದ ಇತಿಹಾಸ ನಿರ್ಮಾಣ ನಾವು ಭಾರತೀಯ ವಿಜ್ಞಾನ, ಉದ್ಯಮ, 130 ಕೋಟಿ ಭಾರತೀಯರ ಚೇತನ, ಸ್ಫೂರ್ತಿಯ ಉತ್ತುಂಗವನ್ನು ನೋಡುತ್ತಿದ್ದೇವೆ. 100 ಕೋಟಿ ಲಸಿಕೆ ಡೋಸ್ ಗಡಿ ದಾಟಿದ್ದಕ್ಕೆ ಭಾರತೀಯರಿಗೆ ಶುಭಾಶಯಗಳು. ನಮ್ಮ ವೈದ್ಯರು, ನರ್ಸ್​ಗಳು ಹಾಗೂ ಈ ಮೈಲಿಗಲ್ಲು ಸಾಧಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಾರೆ.

ಇಂದು ಆರ್‌ಎಂಎಲ್ ಆಸ್ಪತ್ರೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಿಎಂ ಮೋದಿಯವರನ್ನು ಹೊರತುಪಡಿಸಿ, ಅನೇಕ ಕೇಂದದ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

error: Content is protected !!