February 24, 2026

Newsnap Kannada

The World at your finger tips!

police 1

ಕೆಟ್ಟು ನಿಂತ ಆಟೋದಲ್ಲಿ 1ಕೋಟಿ ರು ಪತ್ತೆ; ಅಕ್ರಮ ಹಣದ ಶಂಕೆ ?

Spread the love

ಬೆಂಗಳೂರಿನ ಎಸ್‌.ಜೆ.ಪಾರ್ಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿದ್ದ ಆಟೋ ಒಂದರಲ್ಲಿ 1 ಕೋಟಿ ರೂ ನಗದು ಪತ್ತೆಯಾಗಿದೆ.

ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಿರುವ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ.

ಸುರೇಶ್‌, ಪ್ರವೀಣ್‌ ಎಂಬವರು ಆಟೋದಲ್ಲಿ 1 ಕೋಟಿ ರೂ ನಗದು ಸಾಗಿಸುತ್ತಿದ್ದಾಗ ಆಟೋ ಕೆಟ್ಟು ನಿಂತಿತ್ತು. ಅನುಮಾನಾಸ್ಪದವಾಗಿ ಕಂಡುಬಂದ ಆಟೋವನ್ನು ಪರಿಶೀಲಿಸಿದಾಗ 1 ಕೋಟಿ ರೂ. ನಗದು ಪತ್ತೆಯಾಗಿದೆ.

ನಗದಿಗೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪೊಲೀಸ್ ಠಾಣೆಗೆ ಐಟಿ ಇಲಾಖೆ ಅಧಿಕಾರಿಗಳೂ ಭೇಟಿ ನೀಡಿದ್ದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ತಮ್ಮ ಬಳಿ ಇದ್ದ ನಗದು ರಾಜೇಶ್‌ ಎಂಟರ್‌ಪ್ರೈಸಸ್‌ಗೆ ಸೇರಿದ್ದು ಎಂದು ಆರೋಪಿಗಳು ಹೇಳಿದ್ದಾರೆ.

ವಿಜಯನಗರದಿಂದ ಜಯನಗರಕ್ಕೆ ಸಾಗಿಸಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ.

error: Content is protected !!