ಸೃಜನಶೀಲರಾಗಲು ಕುವೆಂಪುರವರ ಸಾಹಿತ್ಯ ಓದಿ : ಪ್ರಾಧ್ಯಾಪಕಿ ಶಾಂತ ಜಯಾನಂದ್

Team Newsnap
1 Min Read

ಸೃಜನಶೀಲರಾಗಲು ಕುವೆಂಪುರವರ ಸಾಹಿತ್ಯ ಓದುವಂತೆ ಪ್ರಾಧ್ಯಾಪಕಿ ಶಾಂತ ಜಯಾನಂದ್ ಕರೆ ನೀಡಿದರು.

ಬೆಂಗಳೂರಿನಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಷ್ಟ್ರ ಕವಿ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಮಾತನಾಡಿದ ಶ್ರೀಮತಿ ಶಾಂತಾ ಜಯಾನಂದ್ ರಾಷ್ಟ್ರಕವಿ ಕುವೆಂಪು ಅವರಜೀವನ ಸಾಹಿತ್ಯ ನಾಟಕ ವಿಶೇಷವಾಗಿ ಅವರು ಸಮಾಜಕ್ಕೆ ಬಿತ್ತರಿಸಿದ ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು

ಕುವೆಂಪು ಅವರು ಸಾಹಿತ್ಯ ಲೋಕದ ಅಜರಾಮರರಾಗಿದ್ದಾರೆ. ಇದಕ್ಕೆ ಮೂಲ ಪುರಾವೆ ಅವರು ನಮ್ಮೊಂದಿಗೆ ಸಾರಿದ ಮಾನವೀಯ ಸಂದೇಶಗಳಾಗಿವೆ ಎಂದು ಅಭಿಪಾಯ ಪಟ್ಟರು.

ಈ ಕಾರ್ಯಕ್ರಮದಲ್ಲಿ ಡಾ.ನಂದಿ ಬಾಷ, ಸಾಹಿತಿ ಡಾ. ರವಿ ದಾನಿ ಹಿರಿಯ ಸಾಹಿತಿ, ಶಿಕ್ಷಕಿ ಶ್ರೀಮತಿ ಹಸೀನಾ ಎಂ ಸಿದ್ದಾಪುರ ಹಾಗೂ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು, ಯುವ ಕವಿಯತ್ರಿ ಸುಷ್ಮಾ ಪ್ರವೀಣ್ ಸಾಗರ,
ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಉಪಸ್ಥಿತರಿದ್ದರು.

Share This Article
Leave a comment