ಡ್ರಗ್ಸ್ ಜಾಲವನ್ನು ಭೇದಿಸಬೇಕು.
ಇಲ್ಲವಾದಲ್ಲಿ ನಮ್ಮ ಮಕ್ಕಳು ಹಾಳಾಗಿಬಿಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ , ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್ ಈಗಿನ ವ್ಯವಸ್ಥೆ
ಯಾರನ್ನಾದರೂ ಸಾಯಿಸಿ ದೊಡ್ಡೊನಾಗಬೇಕು ಎನ್ನೋ ಸ್ಥಿತಿ ಇದೆ.
ಹೀಗಾಗಿ ಸರ್ಕಾರ ಈ ಜಾಲವನ್ನು ಭೇದಿಸಬೇಕು ಎಂದಿದ್ದಾರೆ.
ಸಂಘಸಂಸ್ಥೆಗಳು, ತಂದೆ-ತಾಯಿಗಳು, ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ.
ಒಂದು ಮಗುವನ್ನು ರಕ್ಷಣೆ ಮಾಡುವುದು ಸಮಾಜದ ಎಲ್ಲರ ಹೊಣೆಯಾಗಿದೆ ಎಂದರು.
ರಾಜಕಾರಣಿ ಮಕ್ಕಳು ಕೆಡಲು ಬೇರೆಯವರಿಗಿಂತ ಹೆಚ್ಚು ಅವಕಾಶ ಇದೆ.
ರಾಜಕಾರಣಿ ಮಕ್ಕಳು ಆರ್ಥಿಕವಾಗಿ ಚೆನ್ನಾಗಿ ಇರುತ್ತಾರೆ.
ವಿಶೇಷವಾದ ಸವಲತ್ತುಗಳು ಇರುತ್ತವೆ.
ಹೀಗಾಗಿ ರಾಜಕಾರಣಿ ಮಕ್ಕಳು ಹಾಳಾಗಲು ಹೆಚ್ಚು ಅವಕಾಶವಿದೆ ಎಂದು ಹೇಳಿದರು.
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ