February 19, 2026

Newsnap Kannada

The World at your finger tips!

yuvathi

ಪ್ರೇಮ ವೈಫಲ್ಯ: ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ!

Spread the love

ಮನೆ ಮುಂದೆ ನಿಂತಿದ್ದ ಯುವತಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿ ನಡೆದಿದೆ.

ಪ್ರೇಮ ವೈಫಲ್ಯದಿಂದ ಯುವಕ ಯುವತಿಗೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿಯನ್ನು ಗಗನ್ ಎಂದು ಗುರುತಿಸಲಾಗಿದೆ. ಯುವತಿಗೆ ಚಾಕು ಇರಿದ ನಂತರ ಗಗನ್ ಪೊಲೀಸರ ಮುಂದೆ ಹಾಜರಾಗಿದ್ದಾನೆ. 

ಗಗನ್ ಕಳೆದ 5 ವರ್ಷಗಳಿಂದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಅಲ್ಲದೆ 18 ವರ್ಷ ಆದ ನಂತರ ಆಕೆಯ ಮುಂದೆ ಮದುವೆ ಪ್ರಸ್ತಾಪ ಇಡಲು ಕಾಯುತ್ತಿದ್ದನು. ಇದೀಗ ಆಕೆಗೆ 18 ವರ್ಷ ಕಳೆದಿದ್ದು, ಮದುವೆ ಪ್ರಸ್ತಾಪವನ್ನು ಆಕೆಯ ಮುಂದಿಟ್ಟಿದ್ದಾನೆ. ಈ ವೇಳೆ ಯುವತಿ ಆತನನ್ನು ಮದುವೆ ಆಗಲು ನಿರಾಕರಿಸಿದ್ದಾಳೆ.

ಇತ್ತ ಯುವತಿ ಮನೆಯವರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಯುವತಿ ಕೂಡ ನೀನು ಡ್ರೈವರ್ ಆಗಿದ್ದೀಯಾ. ಹೀಗಾಗಿ ನಿನ್ನನ್ನು ನಾನು ಮದುವೆ ಆಗಲ್ಲ ಎಂದು ನಿಂದಿಸಿದ್ದಳು.

ಇದರಿಂದ ಬೇಸರಗೊಂಡ ಗಗನ್, ಯುವತಿಗೆ ಚಾಕು ಇರಿದಿದ್ದಾನೆ. ನಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

error: Content is protected !!