ನ್ಯೂಸ್ನ್ಯಾಪ್
ಬೆಂಗಳೂರು
ಕನ್ನಡ ಚಿತ್ರರಂಗದಲ್ಕಿನ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ತೀವ್ರ ವಿಚಾರಣೆಗೊಳಪಡಿಸಿದ ನಂತರ ತಮ್ಮ ಹಾಗೂ ವೀರೇನ್ ನಡುವೆ ಸ್ನೇಹವಿತ್ತೆಂದು ಒಪ್ಪಿಗೆ ನೀಡಿದ್ದಾರೆ.
ಸಿಸಿಬಿ ಅಧಿಕಾರಿಗಳಾದ ಶ್ರೀಧರ್ ಪೂಜಾರ್ ಮತ್ತು ಮಹ್ಮದ್ ಸಿರಾಜ್ ನೇತೃತ್ವದ ತಂಡ ಮಡಿವಾಳದ ಸಾಂತ್ವನ ಕೇಂದ್ರ ಭಾನುವಾರವಿಡೀ ನಟಿಯರನ್ನು ವಿಚಾರಣೆಗೊಳಪಡಿಸಿತ್ತು.
ತನಿಖೆಯ ಪ್ರಾರಂಭದಲ್ಲಿ ತಮಗೂ ದೆಹಲಿ ಮೂಲದ ಪೇಜ್ 3 ಪಾರ್ಟಿಗಳ ಆಯೋಜಕ ಕಿಂಗ್ ಪಿನ್ ವೀರೇನ್ ಖನ್ನಾಗೂ ಯಾವುದೇ ಸಂಬಂಧ ಇಲ್ಲ ಎಂದೇ ವಾದಿಸಿದರು.
ಆದರೆ ಸಿಸಿಬಿ ಅಧಿಕಾರಿಗಳು ಇವರ ಸ್ನೇಹದ ಬಗೆಗಿನ ಸಾಕ್ಷ್ಯಗಳನ್ನು ತೋರಿಸಿದಾಗ ತಬ್ಬಿಬ್ಬಾದ ಡ್ರಗ್ಗಿಣಿಯರು ತಮ್ಮ ಹಾಗೂ ವೀರೇನ್ ಖನ್ನಾ ಸ್ನೇಹವನ್ನು ಒಪ್ಪಿಕೊಂಡರು. ನಂತರ ರಾಗಿಣಿಯವರು ‘ರವಿಶಂಕರ್ ಕೂಡ ನನಗೆ ಅಂಥಹದ್ದೇ ಪಾರ್ಟಿಯಲ್ಲಿ ಪರಿಚಯವಾದವರು’ ಎಂದು ರಾಗಿಣಿ ಹೇಳಿದ್ದಾರೆ ಎನ್ನಲಾಗಿದೆ.
ಈ ಪಾರ್ಟಿಗಳು ಕೇವಲ ಕುಡಿತಗಳಿಗೆ ಸೀಮಿತವಾಗಿರುತ್ತಿತ್ತೇ ಹೊರತು ಡ್ರಗ್ಸ್ ಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ಧಾರೆ. ಪೋಲಿಸರು, ನಟಿಯರ ಮಾದಕವಸ್ತು ಸೇವನೆ ಬಗ್ಗೆ ಉದ್ದೀಪನಮದ್ದು ಪರೀಕ್ಷೆಯಲ್ಲಿ ತಿಳಿದು ಬರಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ