ಟ್ರಸ್ಟ್ ಗೆ ಸೇರಿದ 6 ಲಕ್ಷ ರುಗಳನ್ನು ಲಪಟಾಯಿಸಿದ ಖದೀಮರು

Team Newsnap
1 Min Read

ನ್ಯೂಸ್ ಸ್ನ್ಯಾಪ್
ಅಯೋಧ್ಯೆ

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರಾಮ ಜನ್ಮಭೂಮಿ
ತೀರ್ಥಕ್ಷೇತ್ರ ಟ್ರಸ್ಟ್ ನಿಂದ 6 ಲಕ್ಷ ರು.ಗಳನ್ನು ಲಪಟಾಯಿಸಲಾಗಿದೆ.

ನಕಲಿ ಚೆಕ್ ಗಳನ್ನು ಬಳಸಿ ಟ್ರಸ್ಟ್ ನ ಖಾತೆಯಿಂದ ಹಣವನ್ನು ಲಪಟಾಯಿಸುವ ಮೂಲಕ ಈ ದುಷ್ಕೃತ್ಯವನ್ನು ಎಸಗಿದ್ದಾರೆ ಖದೀಮರು.

ಸೆಪ್ಟೆಂಬರ್ ೧ ರಂದು ನಕಲಿ ಚೆಕ್ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ೨.೫ ಲಕ್ಷ ರು ಗಳನ್ನು ಬೇರೊಂದು ಖಾತೆಗೆ ವರ್ಗಾಯಿಸಿರುವ ದುಷ್ಕರ್ಮಿಗಳು ಸೆಪ್ಟಂಬರ್ ೮ರಂದು ೩.೫ ಲಕ್ಷ ರುಗಳನ್ನು ಅದೇ ಖಾತೆಗೆ ವರ್ಗಾಯಿಸಿದ್ದಾರೆ. ಮತ್ತೆ ಸೆಪ್ಟೆಂಬರ್ ೯ರಂದು ದುಷ್ಕರ್ಮಿಗಳು ೯ಲಕ್ಷದ ೮೬ಸಾವಿರದ ಚೆಕ್ ನ್ನು ಬ್ಯಾಂಕಿನಲ್ಲಿ ನೀಡಿದಾಗ ಅನುಮಾನಗೊಂಡ ಬ್ಯಾಂಕ್ ನ‌ ಅಧಿಕಾರಿಗಳು ಬ್ಯಾಂಕ್ ಖಾತೆಯ ಜೊತೆ ಅಧಿಕೃತ ಸಹಿ ಹೊಂದಿದ್ದ ಗ್ರಾಹಕರನ್ನು ಕರೆಸಿ‌ ವಿಚಾರಿಸಿದ್ದಾರೆ.

ಈ ಮೊದಲು ಆ ಮೂರು ಚೆಕ್ ಗಳು ನಕಲಿ ಎಂದು ಪತ್ತೆಯಾಗಿದೆ. ಈ ಕೃತ್ಯವನ್ನು ಮಾಡಿದವರು ಯಾರು ಎಂದು ಪತ್ತೆಯಾಗಿಲ್ಲ. ಪೋಲೀಸರು ಪ್ರಕರಣ ಕುರಿತು ತನಿಖೆ ಆರಂಭಿಸಿದ್ದಾರೆ.

Share This Article
Leave a comment