ಕೊರೋನಾಗೆ ಮುಂದಿನ ವರ್ಷದ ಮಧ್ಯ ಭಾಗದವರೆಗೆ ಲಸಿಕೆ ಇಲ್ಲ

Team Newsnap
1 Min Read

ಜಿನೆವಾ
ವಿಶ್ವಾದ್ಯಂತ ಮಹಾಮಾರಿಯಾಗಿ ಕಾಡುತ್ತಿರುವ ಕರೋನಾ ವೈರಸ್‌ ಗೆ 2021 ರ ಮಧ್ಯಭಾಗದ ವರೆಗೆ ಲಸಿಕೆ ಸಿಗುವುದು ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ವಿಜ್ಞಾನಿ ಮಾರ್ಗರೇಟ್ ಹ್ಯಾರಿಸ್ ಅವರು ಕೋಡ್ 19, 2021ರ ಮಧ್ಯ ಭಾಗದವರೆಗೆ ಸಾರ್ವತ್ರಿಕ ಲಸಿಕೆ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
ಈಗಾಗಲೇ ಹಲವು ಸಂಸ್ಥೆಗಳು ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಿವೆ ಕನಿಷ್ಠ ಆರು ಮಂದಿ ಅದರ ಸಕಾರಾತ್ಮಕ ಪರಿಣಾಮ ಪಡೆಯುತ್ತಿದ್ದಾರೆ ಎಂದಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ವಿಜ್ಞಾನಿ ಭಾರತ ಮೂಲದ ವೈದ್ಯೆ ಡಾ. ಸೌಮ್ಯಾ ಸ್ವಾಮಿನಾಥನ್ ಲಸಿಕೆಯ ಪ್ರಯೋಗ ಇದೀಗ ನಿರ್ಣಾಯಕ ಹಂತ ತಲುಪಿದೆ ಎಂದು ಹೇಳಿದ್ದಾರೆ

TAGGED: ,
Share This Article
Leave a comment