ಅಯೋಧ್ಯೆ ಆಯ್ತು: ಈಗ ಮಥುರಾ

Team Newsnap
1 Min Read
Picture credits: prajavani.net

ಅಯೋಧ್ಯೆಯ ರೀತಿಯಲ್ಲೇ ಈಗ ಮಥರಾದಲ್ಲೂ ಸಹ ಅಲ್ಲಿನ ಈದ್ಗಾ ಮಸೀದಿ ಬೀಳಿಸಿ ಅದು ಕೃಷ್ಣನ ಜನ್ಮಭೂಮಿ ಎಂದು ಸಾಧಿಸಲು ಕೃಷ್ಣ ಭಕ್ತರು ಮುಂದಾಗಿದ್ದಾರೆ.

ಮೊಘಲರ ದೊರೆ ಔರಂಗಜೇಬ್ 1670 ರಲ್ಲಿ, ಕೃಷ್ಣ ಜನ್ಮಸ್ಥಾನದಲ್ಲಿದ್ದ ಕಾತ್ರ ಕೇಶವ ದೇವ ದೇವಸ್ಥಾನದ ಅಧೀನದಲ್ಲಿದ್ದ ಸ್ಥಳದಲ್ಲಿ ಈದ್ಗಾ ಮಸೀದಿಯನ್ನು ಕಟ್ಟಲು ಆದೇಶ ನೀಡಿದ್ದನು.
ಈ ಘಟನೆ ಕುರಿತ ಆದೇಶದ ಪ್ರತಿಯನ್ನು ಪರ್ಷಿಯನ್‌ ಭಾಷೆಯಲ್ಲಿ ಬರೆಸಿದ್ದನು. ಆದೇಶದ ಪ್ರತಿಯನ್ನು ಖ್ಯಾತ ಇತಿಹಾಸಕಾರ ದಿವಂಗತ ಜದುನಾಥ್ ಸರ್ಕಾರ್ ಇಂಗ್ಲೀಷ್‌ಗೆ ಭಾಷಾಂತರಿಸಿ ಪ್ರಕಟಿಸಿದ್ದರು.

ಈಗ ಮಥುರಾದ ಸಿವಿಲ್‌ ಕೋರ್ಟ್‌ನಲ್ಲಿ ಇದರ ಬಗ್ಗೆ ವಿವಾದ ಇತ್ಯರ್ಥ ಕಾದು ಕುಳಿತಿದೆ. ಈದ್ಗಾ ಮಸೀದಿ ಟ್ರಸ್ಟ್‌ನಿಂದ ವಾಪಸ್ ಪಡೆದುಕೊಳ್ಳಲು ಭಕ್ತರು ಪ್ರಯತ್ನಿಸುತ್ತಿದ್ದಾರೆ.

Share This Article
Leave a comment