ಪಿತೃಪಕ್ಷದ ಸಂದರ್ಭದಲ್ಲಿ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡಿ ತಿಲ ತರ್ಪಣ ಬಿಡುವುದು ನಮ್ಮ ಸಂಸ್ಕೃತಿ, ಸಂಪ್ರದಾಯ.
ಆದರೆ ನಮ್ಮ ನಡುವಿನ ಒಬ್ಬ ನಿಸ್ವಾರ್ಥ ಸೇವಕರೊಬ್ಬರು ದೇಶದಲ್ಲಿ ಅಗಲಿದ ಗಣ್ಯಾತಿಗಣ್ಯರಿಗೆ, ಹುತಾತ್ಮ ಸೈನಿಕರಿಗೆ ಪಿಂಡ ಪ್ರದಾನ ಮಾಡಿ, ತಿಲ ತರ್ಪಣ ಬಿಟ್ಟು ಸಾರ್ಥಕತೆಯನ್ನು ಮೆರೆದಿದ್ದಾರೆ.
ಬಿಜೆಪಿಯ ಮಾಧ್ಯಮ ಸದಸ್ಯ, ಹಿರಿಯರ ಪತ್ರಕರ್ತ ಹೇಮಂತ್ ನಮ್ಮ ದೇಶದ ರಾಜಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಿನಿಮಾ ರಂಗ, ದೇಶದ ಸೇನೆಯ ಕ್ಷೇತ್ರ ಹೀಗೆ ಎಲ್ಲ ರಂಗಗಳಲ್ಲೂ ಸಾಧನೆ ಮಾಡಿ ನಮ್ಮನ್ನಗಲಿದ ಗಣ್ಯರಿಗೆ. ಹುತಾತ್ಮರಾದ ಸೈನಿಕರಿಗೆ ಪ್ರತಿವರ್ಷ ತಪ್ಪದೇ ಪಿಂಡ ಪ್ರದಾನ ಮಾಡಿ ಹಿರಿಯರ ಸೇವೆ ಮಾಡುತ್ತಾ ಬಂದಿದ್ದಾರೆ ಹೇಮಂತ್
ಶ್ರೀರಂಗಪಟ್ಟಣದ ವೇದ ವಿದ್ವಾನ್ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಪತ್ರಕರ್ತ ಹನುಮೇಶ್ ಯಾವಗಲ್ ಕೂಡ ಪಾಲ್ಗೊಂಡಿದ್ದರು.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು