July 6, 2022

Newsnap Kannada

The World at your finger tips!

lovers,suicide,banglore

Lovers in the shopping complex are not lovers - just friends

ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬಿದ್ದವರು ಪ್ರೇಮಿಗಳಲ್ಲ – ಕೇವಲ ಸ್ನೇಹಿತರು

Spread the love

ಬೆಂಗಳೂರಿನ ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಬಿದ್ದ ಯುವಕ – ಯುವತಿಯರ ಪ್ರಕರಣ ಮತ್ತೊಂದು ತಿರುವಿಗೆ ಹರಡಿಕೊಂಡಿದೆ. ಅವರಿಬ್ಬರು ಪ್ರೇಮಿಗಳಲ್ಲ. ಸ್ನೇಹಿತರಷ್ಟೇ ಎಂದು ಪೋಲಿಸರು ತಿಳಿಸಿದ್ದಾರೆ

ಇದನ್ನು ಓದಿ –ಬೆಂಗಳೂರು ಡಿಸಿ ಕಚೇರಿ ಮೇಲೆ ACB ದಾಳಿ; DC ಆಪ್ತ ಸಹಾಯಕ 5 ಲಕ್ಷ ರು ಲಂಚ ಸ್ವೀಕಾರ ವೇಳೆ ಬಲೆಗೆ

ಸ್ನೇಹಿತನೊಂದಿಗೆ ಶಾಪಿಂಗ್ ಗೆ ಬಂದು ಸ್ಟೇರ್ಸ್ ಮೇಲಿನಿಂದ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಆ ಯುವಕ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ

ಬೆಂಗಳೂರಿನ ಬ್ರಿಗೇಡ್ ರಸ್ತೆಯ ಐದನೇ ಕ್ರಾಸ್ ನ ಅವೆನ್ಯೂ ಶಾಪಿಂಗ್ ಕಾಂಪ್ಲೆಕ್ಸ್ ಗೆ ಶಾಪಿಂಗ್ ಗೆ ಸ್ನೇಹಿತನ ಜತೆ ಬಂದಿದ್ದ ಯುವತಿ ಕಾಂಪ್ಲೆಕ್ಸ್ ನ ಸ್ಟೇರ್ಸ್ ನಿಂದ ಕಾಲು ಜಾರಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೇ ತೀವ್ರ ರಕ್ತಸ್ರಾವದಿಂದಾಗಿ ಯುವತಿ ಕೊನೆಯುಸಿರೆಳೆದಿದ್ದಾಳೆ. ಯುವತಿಯನ್ನು ರಕ್ಷಿಸಲು ಹೋಗಿ ಆಕೆಯ ಸ್ನೇಹಿತ ಕೂಡ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತ ಯುವತಿ ಆಂಧ್ರ ಮೂಲದ ಲಿಯಾ ಎಂದು ಗುರುತಿಸಲಾಗಿದೆ. ಗಾಯಾಳು ಯುವಕ ಬೆಂಗಳೂರಿನ ಕ್ರಿಸ್ ಎಂದು ತಿಳಿದುಬಂದಿದೆ. ಇಬ್ಬರೂ ಬೆಂಗಳೂರಿನ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದರು.

ಆರಂಭದಲ್ಲಿ ಯುವಕ-ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿತ್ತು. ಆದರೆ ಪೊಲೀಸರ ಮಾಹಿತಿ ಪ್ರಕಾರ ಇದು ಮೇಲ್ನೋಟಕ್ಕೆ ಆತ್ಮಹತ್ಯೆಯ ಯತ್ನದಂತೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಗಾಯಾಳು ಕ್ರಿಸ್ ಹೇಳುವ ಪ್ರಕಾರ ಲಿಯಾ ಹಾಗೂ ನಾನು ಲವರ್ಸ್ ಅಲ್ಲ, ಸ್ನೇಹಿತರಷ್ಟೇ. ನಾವೆಲ್ಲರೂ ಶಾಪಿಂಗ್ ಗಾಗಿ ತೆರಳಿದ್ದೆವು ಕಾಂಪ್ಲೆಕ್ಸ್ ನ ಎರಡನೇ ಫ್ಲೋರ್ ಸ್ಟೇರ್ ನಿಂದ ಲಿಯಾ ಕಾಲು ಜಾರಿ ಬಿದ್ದಿದ್ದಾಳೆ ಎಂದು ತಿಳಿಸಿದ್ದಾನೆ.

error: Content is protected !!