November 13, 2025

Newsnap Kannada

The World at your finger tips!

kangana

ರಾಜ್ಯಪಾಲರನ್ನು ಭೇಟಿಯಾದ ನಟಿ ಕಂಗಾನ ರಣಾವತ್

Spread the love

ನ್ಯೂಸ್ ಸ್ನ್ಯಾಪ್.
ಮುಂಬೈ.

ಬಾಲಿವುಡ್ ಮಾಫಿಯಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ಸಮರ ಸಾರಿರುವ ನಟಿ ಕಂಗನಾ ರಣಾವತ್ ಭಾನುವಾರ ಮಾಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಭೇಟಿಯ ವೇಳೆ ನಡೆದ ಮಾತುಕತೆಯ ವಿವರಗಳು ಲಭ್ಯವಾಗಿಲ್ಲ. ಭೇಟಿಯ ಅಜೆಂಡಾ ಕೂಡ ಗೌಪ್ಯವಾಗಿತ್ತು. ರಾಜ್ಯಪಾಲರ ಭೇಟಿಯ ವೇಳೆ ಸಹೋದರಿ ಕಂ ಮ್ಯಾನೇಜರ್ ರಂಗೋಲಿ ಚಾಂದಲ್ ಸಾಥ್ ನೀಡಿದ್ದರು. ಕಂಗಾನ್ ರಾಜಭವನಕ್ಕೆ ಬರುವುದಕ್ಕೂ ಮುನ್ನ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜ್ಯಪಾಲರ ಭೇಟಿಯ ನಂತರ ನಟಿ ಕಂಗಾನ ರಾಣಾವತ್ ತವರು ರಾಜ್ಯ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಮಾಡಿದರು.

error: Content is protected !!