January 27, 2026

Newsnap Kannada

The World at your finger tips!

07 09 2020 kangna ranaut 20718933

ಕಂಗನಾಳನ್ನು ಬಿಜೆಪಿಗೆ ಆಹ್ವಾನಿಸಿದ ಕೇಂದ್ರ ಸಚಿವ ಅಠವಾಳೆ

Spread the love

ನ್ಯೂಸ್ ಸ್ನ್ಯಾಪ್
ಮುಂಬೈ

ಶಿವಸೇನೆಯ ವಿರುದ್ಧ ಸೆಡ್ಡು ಹೊಡೆದಿರುವ ನಟಿ ಕಂಗನಾ ರನಾವತ್ ಮೇಲೆ ದೇಶದ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಕಣ್ಣು ಬಿದ್ದಿದೆ.

ಇದಕ್ಕೆ ಸಾಕ್ಷಿಯೆಂಬಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ರಾಮದಾಸ ಅಠಾವಳೆಯವರು ‘ಕಂಗನಾ ಅವರು ಬಿಜೆಪಿಗೆ ಸೇರುವದಾದರೆ ಅವರಿಗೆ ತುಂಬು ಹೃದಯದ ಸ್ವಾಗತವಿದೆ’ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಬೃಹನ್ಮುಂಬಯಿ ಮಹಾನಗರ ಪಾಲಿಕೆಯವರು ನಟಿ ಕಂಗನಾ ಅವರ ಬಂಗಲೆಯ ಸ್ವಲ್ಪ ಭಾಗವನ್ನು ಅನಧಿಕೃತವಾಗಿ ಕಟ್ಟಲಾಗಿದೆ ಎಂದು ಬಂಗಲೆಯನ್ನು ಧ್ವಂಸಗೊಳಿಸಿದ್ದ ಬೆನ್ನಲ್ಲೇ ಅವರು ಮುಂಬೈ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.

ಕೇಂದ್ರ ಸಚಿವ ಅಠಾವಳೆ ಶುಕ್ರವಾರ ನಟಿ ಕಂಗನಾಳನ್ನು ಖುದ್ದಾಗಿ ಭೇಟಿ ಮಾಡಿ ‘ತಾವು ಇಷ್ಟಪಡುವದಾದರೆ ಬಿಜೆಪಿ ಅಥವಾ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ ಸೇರಬಹುದು ಎಂದು ಆಹ್ವಾನ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಗನಾ ‘ತಮಗೆ ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಇರಾದೆ ಇಲ್ಲ. ಚಿತ್ರರಂಗದಲ್ಲೇ ಮುಂದುವರೆಯುವ ಆಸೆಯಿದೆ. ಚಿತ್ರರಂಗದಲ್ಲಿರುವವರೆಗೂ ತಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ’ ಎಂದಿದ್ದಾರೆ.

error: Content is protected !!