ಭಾರತದ ಅತೀ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಕೂಡ ಒಂದು. ಕೇವಲ ದೇಶದಲ್ಲದೇ ವಿದೇಶಗಳಲ್ಲೂ ಬಿಜೆಪಿಯ ಶಾಖೆಗಳಿವೆ. ಅಮೇರಿಕದಲ್ಲೂ ಬಿಜೆಪಿಯ ಒಂದು ಶಾಖೆ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಅಮೇರಿಕ ಅಧ್ಯಕ್ಷೀಯ ಚುಣಾವಣೆ ಕುರಿತು ಈ ಶಾಖೆಯು ಅಮೇರಿಕದಲ್ಲಿನ ಬಿಜೆಪಿ ಸದಸ್ಯರಿಗೆ ಕೆಲವು ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದೆ.
‘ಅಮೇರಿಕದಲ್ಲಿ ಮುಂದೆ ನಡೆಯಲಿರುವ ಅಧ್ಯಕ್ಷೀಯ ಚುಣಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡಬಯಸುವ ಬಿಜೆಪಿ ಸದಸ್ಯರು ಎಲ್ಲೂ ಕೂಡ ಬಿಜೆಪಿ ಹೆಸರನ್ನು ಬಳಸಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಮ್ಮ ದೇಶದ ಸಂವಿಧಾನದ ಮೂಲಭೂತ ನಿಯಮಗಳಲ್ಲಿ ಚುಣಾವಣಾ ಪ್ರಚಾರ ಕುರಿತ ಕೆಲವು ನಿಯಮಗಳಿವೆ. ಅವುಗಳಲ್ಲಿ ಮುಖ್ಯವಾದುದು, ನಮ್ಮ ದೇಶದ ಯಾವುದೇ ರಾಜಕೀಯ ಪಕ್ಷ ಬೇರೆ ದೇಶದಲ್ಲಿ ಯಾವುದೇ ವ್ಯಕ್ತಿ ಚುಣಾವಣೆಯಲ್ಲಿ ಸ್ಪರ್ಧೆ ನಡೆಸುತ್ತಿದ್ದರೆ ಆ ವ್ಯಕ್ತಿಯ ಪರವಾಗಿ ಪ್ರಚಾರ ಮಾಡಬಾರದು. ಆ ವ್ಯಕ್ತಿ ನಮ್ಮ ದೇಶಕ್ಕೆ ಎಷ್ಟೇ ಸಹಾಯ ಮಾಡಿದ್ದರೂ, ಎಷ್ಟೇ ಸ್ನೇಹಪರನಾಗಿದ್ದರೂ ಆ ವ್ಯಕ್ತಿಯ ಬೆಂಬಲಕ್ಕೆ ನಿಲ್ಲಬಾರದು ಎಂಬುದು.
ಸಂವಿಧಾನದ ನಿಯಮದ ಆಧಾರದ ಮೇಲೆ ಅಮೇರಿಕದ ಬಿಜೆಪಿ ಘಟಕವು ಈ ನಿರ್ಧಾರ ಕೈಗೊಂಡಿದೆ ಎಂದು ಪಿಟಿಐ ಹೇಳಿದೆ.
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ