January 15, 2025

Newsnap Kannada

The World at your finger tips!

NEET,student,harassment

ಮದ್ದೂರಿನಲ್ಲಿ ಬಲವಂತವಾಗಿ ಪೌರ ಕಾರ್ಮಿಕನನ್ನು ಮ್ಯಾನ್ ಹೋಲ್ ಇಳಿಸಿ ಕಿರುಕುಳ – ನೌಕರ ಆತ್ಮಹತ್ಯೆ

Spread the love

ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಮಲ ಸ್ವಚ್ಚಗೊಳಿಸಿದ್ದ ಪ್ರಕರಣದಲ್ಲಿ ಬಲಿಪಶುವಾಗಿದ್ದ ಮದ್ದೂರಿನ ಪೌರಕಾರ್ಮಿಕ ನಾರಾಯಣ, ಪುರಸಭೆ ಅಧಿಕಾರಿಗಳ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೆಲ ದಿನಗಳ ಹಿಂದೆ ಪೌರಕಾರ್ಮಿಕ ನಾರಾಯಣರನ್ನು ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್. ಆರೋಗ್ಯ ನಿರೀಕ್ಷಕ ಝಾಸಿಂಖಾನ್.ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್ ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಬರಿಗೈಯ್ಯಲ್ಲಿ ಮಲ ಸ್ವಚ್ಚಗೊಳಿಸಿದ್ದರು.

5f96d817 4122 4f27 990a 5305f26411e8

ಈ ಪ್ರಕರಣ ಮಾದ್ಯಮಗಳಲ್ಲಿ ಸೋರಿಕೆಯಾಗಲು ಪುರಸಭೆಯ ಹೊರಗುತ್ತಿಗೆ ವಾಹನ ಚಾಲಕ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಕಾರಣರೆಂದು ಶ್ರೀನಿವಾಸ್ ರನ್ನು ಕೆಲಸದಿಂದ ಏಕಾಏಕೀ ಕೈ ಬಿಡಲಾಗಿತ್ತು.

ಈ ಸಂಬಂದ ಹೊರಗುತ್ತಿಗೆ ವಾಹನ ಚಾಲಕರ ಸಂಘಟನೆ ಪ್ರತಿಭಟನೆ ನಡೆಸಿ ಪ್ರಕರಣವನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೆ ತಂದಿತ್ತು.

ಅಧಿಕಾರಿಗಳು ಖಾಯಂ ಪೌರಕಾರ್ಮಿಕ ನಾರಾಯಣ್ ರನ್ನು ಬೆದರಿಸಿ ತಾನೇ ಸ್ವಯಂ ಆಗಿ ಮ್ಯಾನ್ ಹೋಲ್ ಗೆ ಇಳಿದಿದ್ದಾಗಿ ಹೇಳಿಕೆ ನೀಡುವಂತೆ ಬೆದರಿಸಿದ್ದರು.

ಅಧಿಕಾರಿಗಳ ಈ ಕಿರುಕುಳಕ್ಕೆ ಅಂಜಿದ ಪೌರಕಾರ್ಮಿಕ ನಾರಯಣ್ ತನ್ನ ಸಾವಿಗೆ ಮುಖ್ಯಾಧಿಕಾರಿ ಮುರುಗೇಶ್. ಆರೋಗ್ಯ ನಿರೀಕ್ಷಕ ಝಾಸಿಂಖಾನ್ ಹಾಗು ಇತರರು ಕಾರಣರೆಂದು ಪತ್ರ ಬರೆದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಮೃತ ದೇಹವನ್ನು ಮದ್ದೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ

Copyright © All rights reserved Newsnap | Newsever by AF themes.
error: Content is protected !!