January 9, 2025

Newsnap Kannada

The World at your finger tips!

zp mandya

ಮಂಡ್ಯ ಜಿಪಂನಲ್ಲಿ ಅಧ್ಯಕ್ಷ ಗಾದಿಗೆ ಕಿತ್ತಾಟ – ಸರಿ, ತಪ್ಪು ಯಾರದ್ದು?

Spread the love

ಮಂಡ್ಯ ಜಿ ಪಂ ಅಧ್ಯಕ್ಷ ಕುರ್ಚಿಗಾಗಿ ಕಾದಾಟ ಶುರುವಾಗಿದೆ. ಅಧ್ಯಕ್ಷರ ಅವಧಿ ಮುಗಿದಿದೆ ಎಂದು ಹೇಳಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಅಶೋಕ್ ಪ್ರಭಾರಿಯಾಗಿ ಅಧ್ಯಕ್ಷ ಪೀಠ ಅಲಂಕರಿಸಿದ್ದು ಈಗ ಸಾಕಷ್ಟು ವಿವಾದಕ್ಕೆ ನಾಂದಿಯಾಗಿದೆ.

ಎಸ್.ನಾಗರತ್ನಸ್ವಾಮಿ ತಾವೇ ಈಗಲೂ ಅಧ್ಯಕ್ಷೆ ಎಂದು ವಾದಿಸಿದ್ದಾರೆ. ಇದು ಶನಿವಾರ ದಿನವಿಡೀ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.

ನಾಟಕೀಯ ಬೆಳವಣಿಗೆಗಳು, ಸರ್ಕಾರದ ಮತ್ತು ಜಿಲ್ಲಾಕಾರಿ ಬರೆದಿರುವ ಪ್ರತ್ಯೇಕ ಪತ್ರಗಳೇ ಜಿ ಪಂ ವರಿಷ್ಠರ ಸ್ಥಾನದ ವಿಚಾರದಲ್ಲಿ ಗೊಂದಲಕ್ಕೆ ಸ್ಷಷ್ಟ ಕಾರಣವೂ ಆಯಿತು.

ಹಾಲಿ ಅಧ್ಯಕ್ಷೆ, ಉಪಾಧ್ಯಕ್ಷೆ ಅಧಿಕಾರ ಮುಗಿದಿದೆಯೋ? ಇಲ್ಲವೋ? ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಆದರೆ, ಜಿ.ಪಂ. ವರಿಷ್ಠರ ಅಧಿಕಾರ ಈಗಾಗಲೇ ಮುಗಿದಿದೆ ಎಂದು ಒಂದು ತಂಡ ವಾದಿಸಿದರೆ, ಹಾಲಿ ಅಧ್ಯಕ್ಷೆ ನಾಗರತ್ನ ಮಾತ್ರ ನಾನು ರಾಜೀನಾಮೆ ನೀಡಿಲ್ಲ ಅಥವಾ ನನ್ನ ಅಧಿಕಾರಾವಧಿ ಮುಗಿದಿಲ್ಲ ವಾದಿಸಿ ಅಧ್ಯಕ್ಷ ಕುರ್ಚಿಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.

2020ರ ಏಪ್ರಿಲ್ 4ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪೀಠಾಕಾರಿ(ಗ್ರಾ.ಪಂ.) ಡಿ.ಜಿ.ನಾರಾಯಣ ಬರೆದಿರುವ ಪತ್ರವನ್ನು ಇಟ್ಟುಕೊಂಡು ಜಿಲ್ಲಾಕಾರಿಯವರ ಪತ್ರದ ನೆರವಿನೊಂದಿಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅವರು ಅಧ್ಯಕ್ಷ ಗಿರಿಯ ಹಕ್ಕು ಚಲಾಯಿಸಿದರು. ಅದರಂತೆ ತಮ್ಮ ಬೆಂಬಲಿಗರ ಸದಸ್ಯರೊಂದಿಗೆ ಶನಿವಾರ ಮಧ್ಯಾಹ್ನದ ಅಧ್ಯಕ್ಷರ ಕೊಠಡಿಗೆ ತೆರಳಿ ಅಧ್ಯಕ್ಷರ ಕುರ್ಚಿ ಮೇಲೆ ಆಸೀನರಾಗಿ, ತಾವು ಪ್ರಕಾರ ಅಧ್ಯಕ್ಷ ರಾಗಿ ಇರುವುದಾಗಿ ಮಾಧ್ಯಮ ರವರಿಗೆ ಮಾಹಿತಿ ನೀಡಿದರು.

ಆದರೆ, ಸಂಜೆ ಬಳಿಕ ಜಿ.ಪಂ. ಕಚೇರಿಗೆ ಆಗಮಿಸಿದ ಅಧ್ಯಕ್ಷೆ ನಾಗರತ್ನಸ್ವಾಮಿ, ಅಧ್ಯಕ್ಷರ ಕಚೇರಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗೆ ದೂರು ನೀಡಿದ್ದಾರೆ. ಇತ್ತ ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ನನ್ನ ಆದೇಶ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಜಿ.ಪಂ. ಕಚೇರಿಯಲ್ಲಿ ಇಡೀ ದಿನ ದೊಡ್ಡ ರಾಜಕೀಯ ಹೈಡ್ರಾಮವೇ ನಡೆಯಿತು

ಡಿಸಿ ಪತ್ರದ ಒಳಾರ್ಥವೇನು?

ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅನಿಯಮ-1993ರ ನಿಯಮ 17ಕ್ಕೆ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು 5 ವರ್ಷಗಳಿಂದ 30 ತಿಂಗಳಿಗೆ ಪ್ರತಿಯೋಜಿಸಿರುವುದರಿಂದ ಜಿ.ಪಂ. ಅಧ್ಯಕ್ಷ ಕರ್ತವ್ಯಗಳನ್ನು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ನಿರ್ವಹಿಸಲು ಅವಕಾಶವಿದೆ. ಹೀಗಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಮನವಿಯಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅನಿಯಮ ಹಾಗೂ ನಿಯಮಗಳನ್ವಯ ಕ್ರಮ ವಹಿಸಲು ಕೋರಿದೆ ಎಂದು ಜಿಲ್ಲಾಕಾರಿಯವರು ಸಿಇಒಗೆ ಪತ್ರ ಬರೆದಿದ್ದರು.

ಆದರೆ, ಈ ಪತ್ರದ ಆಧಾರದ ಮೇಲೆ ಅಶೋಕ್ ಪ್ರಕಾರ ಅಧ್ಯಕ್ಷರಾಗಿ ಅಕಾರ ವಹಿಸಿಕೊಂಡ ಪರಿಣಾಮ ಸೃಷ್ಟಿಯಿಂದ ವಿವಾದದಿಂದ ಶನಿವಾರ ಮಧ್ಯಾಹ್ನ ವೇ ಜಿಲ್ಲಾಕಾರಿ ಡಾ.ವೆಂಕಟೇಶ್ ಮತ್ತೊಂದು ಆದೇಶ ಹೊರಡಿಸಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅವರು ಅಧ್ಯಕ್ಷರಾಗಿ ವಹಿಸಿಕೊಳ್ಳುವಂತೆ ಜಿಲ್ಲಾಕಾರಿ ಕಚೇರಿಯಿಂದ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಶೋಕ್ ಅವರ ಮನವಿಯನ್ನು ಪುರಸ್ಕರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಅದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀಡಿರುವ ಸ್ಪಷ್ಟೀಕರಣ, ಅಶೋಕ್ ನೀಡಿರುವ ಮನವಿಯ ಎರಡು ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಅದರಂತೆ ಸರ್ಕಾರವು ತಿದ್ದುಪಡಿ ತರುವ ಮುಂಚಿತವಾಗಿ 5 ವರ್ಷಗಳ ಅವಧಿ ಇದ್ದು, ಅದನ್ನು 30 ತಿಂಗಳಿಗೆ ಪ್ರತಿಯೋಜಿಸಿ ಮೀಸಲಾತಿ ಬದಲಾಯಿಸಿ ಪ್ರಕಟಿಸುವವವರೆಗೂ ಜಾರಿಗೆ ಬರುವುದಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದಾರೆ.

ಸಿಇಒ ಅವರಿಗೆ ಬರೆದ ಪತ್ರವನ್ನು ಅಶೋಕ್ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಯೇ ಹೊರತು, ಅಧ್ಯಕ್ಷರಾಗಿ ವಂತೆ ಯಾವುದೇ ಲಿಖಿತ ಆದೇಶ ನೀಡಿಲ್ಲವೆ ಎಂದು ಜಿಲ್ಲಾಕಾರಿ ಸ್ಪಷ್ಟಿಪಡಿಸಿದ್ದಾರೆ.
……………

ಎಸ್ಪಿಗೆ ಅಧ್ಯಕ್ಷೆ ನಾಗರತ್ನಸ್ವಾಮಿ ದೂರು ನೀಡಿದ್ದಾರೆ.
ಜಿ.ಪಂ. ಅಧ್ಯಕ್ಷರ ಕಚೇರಿಯನ್ನು ಅತಿಕ್ರಮ ಪ್ರವೇಶ ಮಾಡಿ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ದುವರ್ತನೆ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
………………

ಸಿ. ಅಶೋಕ್ ಮಾಡಿರುವುದು ತಪ್ಪು. ಅವರಿಗೆ ಯಾರೂ ಗೈಡ್ ಮಾಡಿದ್ದಾರೆಂದು ಗೊತ್ತಿಲ್ಲ. ಪ್ರಸ್ತುತ ಅಧ್ಯಕ್ಷರ ಬರುವಾಗ ಹಾಗೂ ಸರ್ಕಾರದ ಯಾವುದೇ ಆದೇಶವಿಲ್ಲ. ಅವರು ಅಧ್ಯಕ್ಷರ ಕಚೇರಿಗೆ ಹೋಗಿ ತಾವು ಅಧ್ಯಕ್ಷ ರೆಂದು ಅಧಿಕಾರ ವಹಿಸಿಕೊಂಡಿರುವುದು ಸರಿಯಲ್ಲ.

  • ಎಸ್.ಎಂ.ಜಲ್ಫಿಕರ್ ಉಲ್ಲಾ, ಸಿಇಒ, ಜಿ.ಪಂ., ಮಂಡ್ಯ
Copyright © All rights reserved Newsnap | Newsever by AF themes.
error: Content is protected !!