ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ ಎಂದು
ಹೆಚ್‍ಡಿಕೆ ವಿರುದ್ಧ ಕಾಂಗ್ರೆಸ್ ನಾಯಕ , ಶಾಸಕ ಜಮೀರ್ ಗುಡುಗಿದ್ದಾರೆ
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಟರ್ಮಿನೇಟರ್ ಎಂದಿದ್ದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನಿಜ, ಚಕ್ರ ತಿರುಗುತ್ತಿದೆ. ನಿಮ್ಮ ಒಂದೊಂದೇ ಬಣ್ಣ ಬಯಲಾಗುವ ಕಾಲ ಆರಂಭವಾಗಿದೆ. ಸಿದ್ದರಾಮಯ್ಯ ಅವರ ಬಗೆಗಿನ ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗುತ್ತಿರೋದು ನೀವೇ ಹೊರತು ಸಿದ್ದರಾಮಯ್ಯ ಅವರಲ್ಲ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲ ಸಂಗಮ ದೇವ”
ಆಗಾಗ ಇದನ್ನು ಓದಿ. ಕುಮಾರಸ್ವಾಮಿ ಸಾಧ್ಯವಾದರೆ ಬದಲಾಗಿ ಎಂದು ಬಸವಣ್ಣನ ವಚನದ ಮೂಲಕ ಹೆಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್ನಲ್ಲಿ, ಮಹಾತ್ಮ ಗಾಂಧೀಜಿ ಅವರನ್ನು ಹಿಂದೂ ವಿರೋಧಿ ಎನ್ನುತ್ತಿದ್ದ ಹಿಂದೂಗಳು, ದಲಿತ ವಿರೋಧಿ ಎನ್ನುತ್ತಿದ್ದ ದಲಿತರು, ಮುಸ್ಲಿಂ ವಿರೋಧಿ ಎನ್ನುತ್ತಿದ್ದ ಮುಸ್ಲಿಂಮರು ಇದ್ದರು. ಮಹಾತ್ಮರ ಬೆನ್ನು ಬಿಡದ ಟೀಕಾಕಾರರು, ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ? ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ