December 29, 2024

Newsnap Kannada

The World at your finger tips!

lohor

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ

Spread the love

ಪಾಕಿಸ್ತಾನದ ಉಗ್ರ, 26-11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ ಲಾಹೋರ್ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಭಯೋತ್ಪಾದನಾ ಕಾರ್ಯಗಳಿಗೆ ಹಣಕಾಸಿನ ನೆರವು ನೀಡಿ, ಕೃತ್ಯ ಗಳಿಗೆ ಪ್ರಚೋದನೆ ಮಾಡಿರುವ ಆಪಾದನೆಯ ಮೇಲೆ ಲಖ್ವಿಗೆ ಶಿಕ್ಷೆ ನೀಡಲಾಗಿದೆ.

ಲಷ್ಕರ್ ಎ ತೈಬಾದ ಆಪರೇಶನ್ಸ್ ಕಮಾಂಡರ್ ಆಗಿರುವ ಜಾಕೀರ್ ಲಖ್ವಿಯನ್ನು ಜ.2ರಂದು ಬಂಧಿಸಲಾ ಗಿತ್ತು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧವೂ ಇದೇ ಆರೋಪದಡಿ ಬಂಧನ ವಾರಂಟ್ ಹೊರಡಿಸಲಾಗಿದೆ

ಮುಂಬಯಿ ದಾಳಿ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಲಖ್ವಿ 2015ರಲ್ಲಿ ಜಾಮೀನು ಪಡೆದಿದ್ದ. ದೇಶದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವ ಉಗ್ರರನ್ನು ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಒತ್ತಡಗಳು ಹೆಚ್ಚಾದ ಹಿನ್ನಲೆಯಲ್ಲಿ ಜ.2ರಂದು ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಗಿತ್ತು.

2008 ರ ನವೆಂಬರ್ 8 ರಂದು ಪಾಕಿಸ್ತಾನದ ಉಗ್ರರು ಮುಂಬೈ ನಲ್ಲಿ ಧಾಳಿ ಮಾಡಿ 166 ಮಂದಿಯನ್ನು ಆಮಾನುಷವಾಗಿ ಕೊಂದು ಹಾಕಿದ್ದರು. ಈ ಪ್ರಕರಣ ಪ್ರಮುಖ ಆರೋಪಿಯೇ ಲಖ್ವಿ.

Copyright © All rights reserved Newsnap | Newsever by AF themes.
error: Content is protected !!