February 20, 2026

Newsnap Kannada

The World at your finger tips!

radhika

ನಟಿ ರಾಧಿಕಾಗೆ ಯುವರಾಜ್ ನಿಂದ 2.5 ಕೋಟಿ ಹಣ : ಸ್ವೀಟಿ ಐಫೋನ್‌ ಸಿಸಿಬಿ ವಶಕ್ಕೆ

Spread the love

ವಂಚಕ ಯುವರಾಜ್ ನಿಂದ ನಟಿ ರಾಧಿಕಾ ಸಿನಿಮಾ ಹೆಸರಿನಲ್ಲಿ ಪಡೆದ ಹಣ ಕೇವಲ 75 ಲಕ್ಷ ರು ಅಲ್ಲ. ಬದಲಿಗೆ 2.5 ಕೋಟಿ ರು ಹಣ ಪಡೆದಿದ್ದಾರೆಂಬ ಸಿಸಿಬಿ ಪೋಲಿಸರ ಪ್ರಶ್ನೆಗೆ ರಾಧಿಕ ಕಕ್ಜಾಬಿಕ್ಕಿ ಆಗಿದ್ದಾರೆ.

ಕಳೆದ ಎರಡೂವರೆ ಗಂಟೆಯಿಂದ ಸಿಸಿಬಿ ಪೋಲಿಸರ ವಿಚಾರಣೆ ಎದುರಿಸಿ ಸುಸ್ತಾಗಿರುವ ರಾಧಿಕಾ ಯುವರಾಜ್ ನಿಂದ ಪಡೆದಿರುವ ಹಣಕ್ಕೆ ಬ್ಯಾಂಕ್ ನ ಸಮಗ್ರ ಡಿಟೇಲ್ಸ್ ತರುವಂತೆ ಹೇಳಿದ್ದರೂ ರಾಧಿಕಾ ಬರೀ ಕೈಲಿ ಬಂದಿದ್ದಾರೆ ಎಂದು ಗೊತ್ತಾಗಿದೆ.

ನಾಟ್ಯ ರಾಣಿ ಶಾಂತಲಾ ಸಿನಿಮಾದಲ್ಲಿ ನಟನೆ ಮಾಡುವ ಕನಸು ಹೊಂದಿದ್ದ‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ, ವಂಚಕ ಯುವರಾಜ್ ಜೊತೆಯಲ್ಲಿ ಆರ್ಥಿಕ ವಹಿವಾಟು ನಡೆಸಿದ್ದಾರೆ. ಆದರೆ ಪೋಲಿಸರಿಗೆ ಮಾತ್ರ 75 ಲಕ್ಷ ರು ಗಳನ್ನು ಯುವರಾಜ್ ನೀಡಿದ್ದಾನೆಂದು ವಿವರಣೆ ಕೊಟ್ಟಿದ್ದಾರೆ. ಈ ಸಂಶಯದ ಆಧಾರದಲ್ಲಿ ಪ್ರಶ್ನೆಗಳ ಸುರಿಮಳೆಯನ್ನು ಪೋಲಿಸರು ಹರಸಿದ್ದಾರೆ.

ರಾಧಿಕಾ ಪೋನ್ ನಲ್ಲಿನ ಎಲ್ಲಾ ಮಾಹಿತಿ- ಫೋಟೋ ಡಿಲಿಟ್ :
ಸ್ವೀಟಿ ರಾಧಿಕಾ ಐಫೋನ್‌ ಅನ್ನು ಸಿಸಿಬಿ ಪೋಲಿಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು.ಈ ವೇಳೆ ರಾಧಿಕಾ‌ ತನ್ನ ಐಫೋನ್ ನಲ್ಲಿ ಇದ್ದ ಎಲ್ಲಾ ಮಾಹಿತಿ ,ಪೋಟೊ , ಚಾಟ್ ಮಾಡಿರುವುದು ಹಾಗೂ ವಿಡಿಯೋ ಎಲ್ಲವನ್ನೂ ಸಮಗ್ರ ವಾಗಿ ಡಿಲಿಟ್ ಮಾಡಿರುವುದು ಬೆಳಕಿಗೆ ಬಂದಿದೆ.

ಆದರೆ ರಂಗೋಲಿಯ ಕೆಳಗೆ ನುಸುಳಿರುವ ಪೋಲಿಸರು ಯುವರಾಜ್ ಪೋನ್ ನಲ್ಲಿದ್ದ ರಾಧಿಕಾ ಹಾಗೂ ಇತರ ನಟಿಯರ ಎಲ್ಲಾ ದಾಖಲೆ ಪೋಟೊ, ವಿಡಿಯೋ, ಚಾಟ್ ಮಾಹಿತಿ ಗಳನ್ನು ಮೊದಲೇ ಸಂಗ್ರಹಿಸಿದ್ದಾರೆ. ಹೀಗಾಗಿ ಮೊಬೈಲ್ ನಲ್ಲಿ ಮಾಹಿತಿ ನಾಶ ಮಾಡಿಕೊಂಡ ಪೋಲಿಸರ ವಿಚಾರಣೆಗೆ ಬಂದಿರುವ ರಾಧಿಕಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತದೆ.

ಈ ನಡುವೆ ಯುವರಾಜ್ ಸಿನಿಮಾ‌ ನಟಿಯರಿಗೆ ಶಾಸ್ತ್ರ ಹೇಳುವ ನೆಪದಲ್ಲಿ ಸಾಕಷ್ಟು ಮೋಸ ಮಾಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.

error: Content is protected !!