February 22, 2026

Newsnap Kannada

The World at your finger tips!

Politics , JDS , Congress

Joining Congress to provide accommodation for those who believe: YSV Datta ನಂಬಿದವರಿಗೆ ನೆಲೆ ಕಲ್ಪಿಸಲು ಕಾಂಗ್ರೆಸ್‌ಗೆ ಸೇರ್ಪಡೆ : ವೈಎಸ್‌ವಿ ದತ್ತ

ವೈಎಸ್ ವಿ ದತ್ತ ಕಡೂರು ಜೆಡಿಎಸ್ ಅಭ್ಯರ್ಥಿ :ಎಚ್ ಡಿ ರೇವಣ್ಣ ಘೋಷಣೆ

Spread the love

ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ಕಾಂಗ್ರೆಸ್ ಸೇರಿ ಟಿಕೆಟ್ ವಂಚಿತರಾದ ವೈಎಸ್ ವಿ ದತ್ತ ಅವರಿಗೆ ಕಡೂರಿನಿಂದಲೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಘೋಷಿಸಿದರು.

ದತ್ತ ನಾಮಪತ್ರ ಸಲ್ಲಿಕೆ ದಿನ ದೇವೇಗೌಡರು ಕಡೂರಿಗೆ ಆಗಮಿಸಿ ಆಶೀರ್ವಾದ ಮಾಡಲಿದ್ದಾರೆ ಎಂದು ರೇವಣ್ಣಹೇಳಿದರು.

ದತ್ತರ ನಿವಾಸಕ್ಕೆ ಇಂದು ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಜೆಡಿಎಸ್ ಗೆ ರೆಬಲ್ ಆಗಿದ್ದ ದತ್ತ ಮನಸ್ಥಿತಿ ಬದಲಿಸಿದರು.

ನಿನ್ನೆ ಸ್ವತಃ ದೇವೇಗೌಡರೇ ದತ್ತ ಜೊತೆ ದೂರವಾಣಿಯಲ್ಲಿ ಮಾತನಾಡಿ ಜೆಡಿಎಸ್ ಮರಳುವಂತೆ ಸೂಚನೆ ನೀಡಿದ್ದ ಬೆನ್ನಲ್ಲೇ ದತ್ತ ಜೆಡಿಎಸ್ ಗೆ ವಾಪಸ್ಸಾಗಿದ್ದಾರೆ.

ಹಾಸನ ಟಿಕೆಟ್ ಅನ್ನು ಕುಮಾರಸ್ವಾಮಿ ಸಾಮಾನ್ಯ ಕಾರ್ಯ ಕರ್ತನಿಗೆ ನೀಡುವ ಬಯಕೆಗೆ, ದತ್ತ ಜೆಡಿಎಸ್ ಪುನರಾಗಮನವು ಸರಳ ದಾರಿ ಮಾಡಿಕೊಟ್ಟಂತಾಯಿತು.

error: Content is protected !!