- ಮೂವರಿಗೆ ಡ್ರಿಲ್ ಮಾಡಿ ಸತ್ಯ ಹೊರ ಬರುತ್ತದೆ
- ಮೂವರ ಕುತಂತ್ರ ಕ್ಕೆ ಹೆದರುವುದೇ?
- ಅಡುಗೆ ಭಟ್ಟನಿಗೆ ಹೊಂಡಾ ಕ್ರೇಟಾ ಕಾರು
ಅಪ್ಪಾಜಿಯ ಸಿ ಡಿ ಇರೋದು ನಿಜ. ಮನುಷ್ಯರು ಮಾಡೋದನ್ನೇ ನೀವು ಮಾಡಿದ್ದೀರಿ. ತಲೆಕೆಡಿಸ್ಕೋ ಬೇಡಿ ರಿಲೀಸ್ ಆದ್ರೆ ಆಗ್ಲಿ..ಎಂದ ಬಿಎಸ್ ವೈ ಶಿಷ್ಯ ನಂಜುಂಡಸ್ವಾಮಿ ಹೊಸ ಬಾಂಬ್ ಸ್ಫೋಟ ಮಾಡಿದ್ದಾರೆ.
ಮೂವರಿಗೆ ಡ್ರಿಲ್ ಮಾಡಿ ಸತ್ಯ ಹೊರ ಬರುತ್ತದೆ :
ಸಿಎಂ ಯಡಿಯೂರಪ್ಪ ಆಪ್ತ ಶಿಷ್ಯ ನಂಜುಂಡಸ್ವಾಮಿ ಈ ಕುರಿತಂತೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಿ ಡಿ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಡಿ ಇರೋದು ನಿಜ. ಆದ್ರೆ ಆ ಸಿ ಡಿ ಮಾಡಿರುವುದು ಮನೆಯಲ್ಲಿದ್ದ ಮೂರು ಜನ ಕೆಲಸಗಾರರು ಎಂದು ಹೇಳಿದ್ದಾರೆ.
ಡಿಕೆಶಿ ಹಾಗೂ ತಮ್ಮದೇ ಪಕ್ಷದ ಕೆಲವು ನಾಯಕರು ಸಿ ಡಿ ಇದೆ ಇದೆ ಎಂದು ಹೇಳುತ್ತಿದ್ದಾರೆ, ಆದರೆ ಸಿ ಡಿ ಮಾಡಲು ಹೇಳಿದವರನ್ನು ತಂದು ಪೋಲಿಸ್ ರಿಂದ ಡ್ರಿಲ್ ಮಾಡಿಸಿ ಯಾರು ಮಾಡಲು ಹೇಳಿದ್ದರು? ಯಾಕೆ ಮಾಡಲು ಹೇಳಿದ್ದರು? ಅನ್ನೋದು ಗೊತ್ತಾಗತ್ತೆ ಅಂತಾ ಸಿ ಡಿ ಇರುವ ರಹಸ್ಯವನ್ನು ಬಿಚ್ಚಿಟ್ಟರು.
ಮೂವರ ಕುತಂತ್ರ ಕ್ಕೆ ಹೆದರುವುದೇ? :
ಸಿಎಂ ಯಡಿಯೂರಪ್ಪ ಮನೆಯಲ್ಲಿ ಕೆಲಸ ಮಾಡುವ ಅಡುಗೆ ಭಟ್ಟ ಸಿದ್ಧರಾಮ, ಗನ್ ಮ್ಯಾನ್ ಕೇಶವ ಮೂರ್ತಿ, ನೊಣವಿನಕೆರೆ ಸಂತೋಷ ಎಂಬುವರೇ ಈ ಕೃತ್ಯವನ್ನು ಮಾಡಿದ್ದಾರೆ. ಈ ಮೂವರಿಗೆ ಡ್ರಿಲ್ ಮಾಡಿ ನಿಜಾಂಶ ಗೊತ್ತಾಗತ್ತೆ ಅಂತಾ ಹೇಳಿದರು.
ಅಡುಗೆ ಭಟ್ಟನಿಗೆ ಹೊಂಡಾ ಕ್ರೇಟಾ ಕಾರು :
ಅಡುಗೆಭಟ್ಟ ಒಂದು ಹೋಂಡಾ ಕ್ರೆಟಾ ಕಾರು ಕೂಡಾ ತೆಗೆದುಕೊಂಡಿದ್ದಾನೆ. ಈತ ಒಬ್ಬ ಆಡುಗೆಭಟ್ಟ ಈತನಿಗೆ ಇಂತಹ ದೊಡ್ಡ ಕಾರು ತೆಗೆದುಕೊಳ್ಳಲು ಅಷ್ಟು ದುಡ್ಡು ಎಲ್ಲಿಂದ ಬಂತು?
ಅಪ್ಪಾಜಿ ನೀವು ಯಾರು ಮಾಡುವುದೇ ಇರುವುದನ್ನು ನೀವು ಏನು ಮಾಡಿಲ್ಲ. ನೀವ್ಯಾಕೆ ಭಯ ಬೀಳ್ತೀರಾ. ಅದು ಮನುಷ್ಯನ ಸಹಜ ಗುಣ ಹೀಗಾಗಿ ನೀವು ಯಾವುದಕ್ಕೂ ತಲೆ ಕೆಡಿಸ್ಕೊಬೇಡಿ, ವಿಜಯ್ ಅಣ್ಣಾ ನೀವು ಕೂಡಾ ಯಾವುದಕ್ಕೂ ತಲೆ ಕೆಡಿಸ್ಕೊಬೇಡಿ ಸಿ ಡಿ ರಿಲೀಸ್ ಆದ್ರೆ ಆಗಲಿ ಎಂದು ನಂಜುಂಡಸ್ವಾಮಿ ಹೇಳಿದ್ದಾರೆ.
ಇಷ್ಟೆಲ್ಲ ಚರ್ಚೆಗೆ ಗ್ರಾಸವಾದ ಈ ಸಿ ಡಿಯಲ್ಲಿ ಅಷ್ಟಕ್ಕೂ ಏನೇನಿದೆ ಎಂಬುದನ್ನು ಸಿ ಡಿ ಮಾಡಿದ ಬ್ರಹ್ಮ ಬಲ್ಲ?!
- ₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
- ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
- 2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
- KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
- 1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
More Stories
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು