ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸರ್ಕಲ್ ಬಳಿಯ
ಜನನಿಬಿಡ ಪ್ರದೇಶದಲ್ಲಿ ಯುವಕನನ್ನು ಅಟ್ಟಾಡಿಸಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಅರಳಿಕಟ್ಟೆ ಸರ್ಕಲ್ ಬಳಿ ರಂಗೋಲಿಹಳ್ಳದ ರಘು ಎಂಬಾತನನ್ನು ಕೊಚ್ಚಿ ಹತ್ಯೆ ಮಾಡಲಾಗಿದೆ.
ಮೂವರು ಯುವಕರ ಗುಂಪು ಮಚ್ಚು ಲಾಂಗು ಹಿಡಿದು ಬೈಕ್ ನಲ್ಲಿ ಬಂದು ರಘು ಮೇಲೆ ಅಟ್ಯಾಕ್ ಮಾಡಿದರು. ನಂತರ ಖಾರದ ಪುಡಿ ಎರಚಿ ರಘು ಆ ಕಡೆ ಈ ಕಡೆ ಹೋಗದಂತೆ ತಡೆದಿದ್ದಾರೆ.
ನುಗ್ಗಿ ಹೊಡೆದ ದುಷ್ಕರ್ಮಿಗಳು:
ನಂತರ ಪಾತಕಿಗಳು ಮಚ್ಚು, ಲಾಂಗ್ ಬೀಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಲು ಮಚ್ಚಿನೇಟು ತಿಂದ ರಘು ಅಲ್ಲೆ ಇದ್ದ ಟೀ ಅಂಗಡಿ ಹೊಕ್ಕಿದ್ದಾನೆ. ಅಲ್ಲಿಗೂ ಬಂದ ಮೂವರು ಯುವಕರ ಗುಂಪು ಮನಸ್ಸೊ ಇಚ್ಚೆ ರಘುವನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಸಿಸಿಟಿವಿಯಲ್ಲಿ ಹತ್ಯೆಯ ದೃಶ್ಯ ಸೆರೆ:
ಕೊಲೆ ಮಾಡಿದ ನಂತರ ಪಾತಕಿಗಳು ಒಂದೇ ಬೈಕ್ ನಲ್ಲಿ ಎಸ್ಕೆಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ನೇಹಿತರ ನಡುವಿನ ವೈಷಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ಈಗ ಪಾತಕಿಗಳಿಗೆ ಎಡೆಮುರಿ ಕಟ್ಟಲು ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ