ರಾಂಚಿ: ಜಾರ್ಖಂಡ್‍ನಲ್ಲಿ ಇನ್‍ಸ್ಟಾ ರೀಲ್ ಮಾಡಲು ಹೋಗಿ ಹುಡುಗನೊಬ್ಬ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ .
ಮೃತ ಯುವಕ ತೌಸಿಫ್ ಗೆಳೆಯನೊಬ್ಬನ ಜೊತೆ ವೀಡಿಯೋ ಮಾಡಲು ಹೇಳಿ 100 ಅಡಿ ಎತ್ತರದಿಂದ ನೀರಿನ ಕ್ವಾರಿಗೆ ಹಾರಿದ್ದು , ಹಾರಿದ ಕೆಲ ಹೊತ್ತಿನ ಬಳಿಕ ನಾಪತ್ತೆಯಾಗಿದ್ದಾನೆ.
ತೌಸಿಫ್ ಗೆಳೆಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು , ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತೌಸಿಫ್‍ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಇದನ್ನು ಓದಿ -ಮೈಸೂರು: ಒಂದೇ ಕುಟುಂಬದ ನಾಲ್ವರ ಸಾವು- ಅನಿಲ ಸೋರಿಕೆ ದುರಂತಕ್ಕೆ ಕಾರಣ
ಈ ವೇಳೆ ತೌಸಿಫ್ ಶವವಾಗಿ ಪತ್ತೆಯಾಗಿದ್ದಾನೆ. ಆತ ನೀರಿಗೆ ಜಿಗಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೀಲ್ಸ್ ಗಾಗಿ ಹುಚ್ಚಾಟ ಮೆರೆದಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ